Select Your Language

Notifications

webdunia
webdunia
webdunia
webdunia

ಹೆಡ್ ಕೋಚ್ ಹುದ್ದೆಗೆ ಆಯ್ಕೆಯಾದರೆ 6 ಸಹಾಯಕರೂ ಜತೆಯಿರಬೇಕು: ರವಿ ಶಾಸ್ತ್ರಿ ಷರತ್ತು

ravi shastri
ಮುಂಬೈ: , ಬುಧವಾರ, 8 ಜೂನ್ 2016 (19:36 IST)
ಹೆಡ್ ಕೋಚ್ ಹುದ್ದೆಗೆ ಅರ್ಜಿ ಹಾಕಿರುವ ರವಿ ಶಾಸ್ತ್ರಿ ಬಿಸಿಸಿಐಗೆ ಒಂದು ಷರತ್ತನ್ನು ಹಾಕಿದ್ದಾರೆ. ಅತೀ ಪ್ರಮುಖ ಮಾಜಿ ಆಟಗಾರರು ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದರೂ ಮಾಜಿ ಟೀಂ ಇಂಡಿಯಾ ಡೈರೆಕ್ಟರ್  ಈ ಸ್ಥಾನಕ್ಕೆ ಫೇವರಿಟ್ ಆಗಿದ್ದು, ತಾವು ಹೆಡ್ ಕೋಚ್ ಹುದ್ದೆಗೆ ಆಯ್ಕೆಯಾದರೆ,  ತಮ್ಮ ಕೈಕೆಳಗಿದ್ದ ಬೆಂಬಲದ ಸಿಬ್ಬಂದಿಯನ್ನು ಉಳಿಸಿಕೊಳ್ಳಬೇಕೆಂಬ ಷರತ್ತು ಹಾಕಿದ್ದಾರೆ. 
 
ಕಳೆದ 18 ತಿಂಗಳಲ್ಲಿ ತಮ್ಮ ಜತೆ ಕೆಲಸ ಮಾಡಿದ ಸಿಬ್ಬಂದಿಯ ಸುದೀರ್ಘ ಪಟ್ಟಿಯನ್ನು ಶಾಸ್ತ್ರಿ ನೀಡಿದ್ದು, ತಮ್ಮ ಆರು ಮಾಜಿ ಸಹಾಯಕರನ್ನು ಉಳಿಸಿಕೊಳ್ಳಲು ನಿರ್ದಿಷ್ಟವಾಗಿ ಕೇಳಿದ್ದಾರೆ. 
 
 ನಂಬಲರ್ಹ ಮೂಲಗಳಿಂದ ಸ್ವೀಕರಿಸಿದ ಮಾಹಿತಿ ಪ್ರಕಾರ, ಶಾಸ್ತ್ರಿ ಭರತ್ ಅರುಣ್(ಬೌಲಿಂಗ್ ಕೋಚ್), ಸಂಜಯ್ ಬಂಗಾರ್(ಬ್ಯಾಟಿಂಗ್ ಕೋಚ್), ಆರ್. ಶ್ರೀಧರ್( ಫೀಲ್ಡಿಂಗ್ ಕೋಚ್), ಪಾಟ್ರಿಕ್ ಫರ್ಹಾರ್ಟ್(ದೈಹಿಕ ತರಬೇತುದಾರ), ಶಂಕರ್ ಬಸು (ಟ್ರೇನರ್), ರಘು( ತಂಡದ ಸಹಾಯಕ)ವನ್ನು ಉಳಿಸಿಕೊಳ್ಳಲು ಬಯಸಿದ್ದಾರೆ. ಕೊನೆಯಲ್ಲಿ ಶಾಸ್ತ್ರಿ ನೆಟ್‌‍ನಲ್ಲಿ ಬ್ಯಾಟ್ಸ್‌ಮನ್‌‌ಗಳಿಗೆ ಲಕ್ಷಾಂತರ ಥ್ರೋಗಳನ್ನು ಎಸೆದು ಕೋಚಿಂಗ್ ಸಿಬ್ಬಂದಿಗೆ ನೆರವಾಗುವ ಯುವ ಸಹಾಯಕನ ಹೆಸರನ್ನು ಕೂಡ ಶಾಸ್ತ್ರಿ ನೀಡಿದ್ದಾರೆ. 
 
ಹೊಸ ಹೆಡ್ ಕೋಚ್ ತಮ್ಮ ಸಹಾಯಕರನ್ನು ಆಯ್ಕೆ ಮಾಡಲು ಮುಕ್ತ ಹಸ್ತ ನೀಡುವುದಾಗಿ ಬಿಸಿಸಿಐ ಕೂಡ ಸ್ಪಷ್ಟೀಕರಣ ನೀಡಿದೆ. ಶಾಸ್ತ್ರಿ ತಮ್ಮ ಮುಂದಾಳತ್ವದಲ್ಲಿ ತಂಡದ ಸಾಧನೆ ಕುರಿತು ಬೆಳಕು ಚೆಲ್ಲಿದ್ದಾರೆ. ವಿಶ್ವ ಕಪ್ ,ವಿಶ್ವ ಟ್ವೆಂಟಿ 20 ಸೆಮಿಫೈನಲ್ ಪ್ರವೇಶ, ಟೆಸ್ಟ್ ನಂಬರ್ 1, ಏಕದಿನ ಪಂದ್ಯ ನಂ. 1, ಟಿ 20 ನಂಬರ್ 2, ಆಸ್ಟ್ರೇಲಿಯಾದಲ್ಲಿ ಟಿ 20 ವೈಟ್ ವಾಷ್, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಜಯ ಮುಂತಾದ ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ.
 
ಬಿಸಿಸಿಐ ಜಾಹೀರಾತಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅತೀ ಗಣ್ಯ ವಿದೇಶಿ ಕೋಚ್ ಆಕಾಂಕ್ಷಿ ಕುರಿತು ಇದುವರೆಗೆ ಮಾಹಿತಿ ಬಂದಿಲ್ಲ. ಅರ್ಜಿ ಜೂನ್ 10ರಂದು ಮುಗಿಯುವುದರಿಂದ ಇನ್ನೂ ಕಾಲಾವಧಿ ಉಳಿದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಓಪನ್ 2ನೇ ಸುತ್ತು ಪ್ರವೇಶಿಸಿದ ಸೈನಾ, ಸಿಂಧು ಔಟ್