Select Your Language

Notifications

webdunia
webdunia
webdunia
webdunia

ಒಂದೊಳ್ಳೆ ಕೆಲಸಕ್ಕೆ ಜೆರ್ಸಿ ದಾನ ಮಾಡಿದ ನ್ಯೂಜಿಲೆಂಡ್ ಕ್ರಿಕೆಟಿಗ ಟಿಮ್ ಸೌಥಿ

ಒಂದೊಳ್ಳೆ ಕೆಲಸಕ್ಕೆ ಜೆರ್ಸಿ ದಾನ ಮಾಡಿದ ನ್ಯೂಜಿಲೆಂಡ್ ಕ್ರಿಕೆಟಿಗ ಟಿಮ್ ಸೌಥಿ
ಆಕ್ಲೆಂಡ್ , ಬುಧವಾರ, 30 ಜೂನ್ 2021 (10:20 IST)
ಆಕ್ಲೆಂಡ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ತಾವು ತೊಟ್ಟಿದ್ದ ಜೆರ್ಸಿಯನ್ನು ನ್ಯೂಜಿಲೆಂಡ್ ಕ್ರಿಕೆಟಿಗ ಟಿಮ್ ಸೌಥಿ ಒಳ್ಳೆಯ ಕೆಲಸಕ್ಕೆ ದಾನ ಮಾಡಿದ್ದಾರೆ.


ನ್ಯೂರೋಬ್ಲಾಸ್ಟೋಮಾ ಎಂಬ ಅಪರೂಪದ ಕ್ಯಾನ್ಸರ್ ನಿಂದ ಬಳಲುತ್ತಿರುವ 8 ವರ್ಷದ ಬಾಲಕಿಯ ಚಿಕಿತ್ಸೆಗೆ ಹಣ ಸಂಗ್ರಹಿಸಲು ಸೌಥಿ ತಮ್ಮ ಸಹಿ ಹಾಕಿದ ಜೆರ್ಸಿಯನ್ನು ದಾನ ಮಾಡಿದ್ದಾರೆ.

ಈ ಜೆರ್ಸಿ ಹರಾಜಿಗೊಳಪಡಲಿದ್ದು, ಇದರಲ್ಲಿ ಬಂದ ಮೊತ್ತ ಬಾಲಕಿಯ ಚಿಕಿತ್ಸೆಗೆ ನೆರವಾಗಲಿದೆ. ಅವರ ಈ ಜೆರ್ಸಿಯಲ್ಲಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಆಡಿದ ಎಲ್ಲಾ ಕಿವೀಸ್ ಆಟಗಾರರ ಸಹಿಯಿದೆ. ಸೌಥಿಯ ಈ ಹೃದಯವಂತಿಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಎಇನಲ್ಲಿ ಟಿ20 ವಿಶ್ವಕಪ್: ಬಿಸಿಸಿಐಗೆ ಐಸಿಸಿ ಗ್ರೀನ್ ಸಿಗ್ನಲ್