ನವದೆಹಲಿ: ಕ್ರಿಕೆಟ್ ನಲ್ಲಿ ಈಗ ವಿರಾಟ್ ಕೊಹ್ಲಿಯದ್ದೇ ಹವಾ. ಅಂತಿಪ್ಪ ಟೀಂ ಇಂಡಿಯಾ ನಾಯಕನ ಒಂದು ಅದ್ಭುತ ಫೋಟೋ ಲಾರ್ಡ್ಸ್ ಮೈದಾನದ ಗ್ಯಾಲರಿಯಲ್ಲಿ ಅಲಂಕೃತವಾಗಲಿದೆ.
ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಟಿ-ಟ್ವೆಂಟಿ ಪಂದ್ಯವಾಡುವಾಗ ಕೊಹ್ಲಿಯ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ಇದನ್ನು ಪ್ರತಿಷ್ಠಿತ ಎಂಸಿಜಿ ಮೈದಾನದಲ್ಲಿ ಸೆರೆ ಹಿಡಿಯಲಾಗಿದೆ. ವಿಶೇಷ ಕ್ಯಾಮರಾ ತಂತ್ರಜ್ಞಾನ ಬಳಸಿ ಈ ಫೋಟೋ ಸೆರೆ ಹಿಡಿಯಲಾಗಿತ್ತು.
ಇತ್ತೀಚೆಗಷ್ಟೇ ವಿಸ್ಡನ್ ಕ್ರಿಕೆಟರ್ ಗೌರವಕ್ಕೆ ಪಾತ್ರರಾಗಿದ್ದ, ಕೊಹ್ಲಿಗೆ ಇದು ಮತ್ತೊಂದು ಗರಿಮೆ. ಈ ಫೋಟೋವನ್ನು ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿ ಖುಷಿ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ