ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಅವರ ಕೊನೆಯ ಕ್ರಿಕೆಟ್ ಸರಣಿಯಾಗಲಿದೆ.
ಅತೀ ಹಿರಿಯ ವಯಸ್ಸಿನ ಕ್ರಿಕೆಟಿಗನೆಂಬ ಖ್ಯಾತಿಗೆ ಪಾತ್ರರಾಗಿದ್ದ ಮಿಸ್ಬಾರನ್ನು ಭಾರತೀಯರು ಮರೆಯಲು ಸಾಧ್ಯವೇ ಇಲ್ಲ. ಧೋನಿ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಕಿರೀಟ ಗೆಲ್ಲಲು ಇದೇ ಮಿಸ್ಬಾ ನೇತೃತ್ವದ ಪಾಕ್ ತಂಡದ ಎದುರು ಆಡಿದ್ದರು. ಅಂದು ಮಿಸ್ಬಾ ಕೊನೆಯ ಎಸೆತದಲ್ಲಿ ಸಿಕ್ಸರ್ ಎತ್ತಲು ಸಾಧ್ಯವಾಗದೇ ಭಾರತ ಕಪ್ ಗೆದ್ದಿತ್ತು.
42 ವರ್ಷದ ಮಿಸ್ಬಾ ಸದ್ಯಕ್ಕೆ ಪಾಕ್ ಟೆಸ್ಟ್ ತಂಡದ ನಾಯಕರಾಗಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾ ಸರಣಿಯಲ್ಲಿ ಹೀನಾಯವಾಗಿ ಸೋತಾಗ ಅವರ ನಾಯಕತ್ವದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ