Select Your Language

Notifications

webdunia
webdunia
webdunia
webdunia

ಹೊನಲು ಬೆಳಕಿನಲ್ಲಿ ನೆಟ್ ಪ್ರಾಕ್ಟೀಸ್ ಮಾಡಲಿರುವ ಟೀಂ ಇಂಡಿಯಾ ಕ್ರಿಕೆಟಿಗರು

ಹೊನಲು ಬೆಳಕಿನಲ್ಲಿ ನೆಟ್ ಪ್ರಾಕ್ಟೀಸ್ ಮಾಡಲಿರುವ ಟೀಂ ಇಂಡಿಯಾ ಕ್ರಿಕೆಟಿಗರು
Cutak , ಬುಧವಾರ, 18 ಜನವರಿ 2017 (09:39 IST)
ಕಟಕ್: ನಾಳೆ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ಹೊನಲು ಬೆಳಕಿನಲ್ಲಿ ನೆಟ್ ಪ್ರಾಕ್ಟೀಸ್ ಮಾಡಲಿದ್ದಾರೆ. ಕಾರಣ, ಹೋಟೆಲ್ ರೂಂ ಸಿಗದ ಸಮಸ್ಯೆ.


ಕೊಠಡಿ ಸಿಗದ ಕಾರಣಕ್ಕೆ ಉಭಯ ತಂಡದ ಆಟಗಾರರು ಇಂದು ಮಧ್ಯಾಹ್ನವಷ್ಟೇ ಕಟಕ್ ಗೆ ಬಂದಿಳಿಯಲಿದ್ದಾರೆ. ನೇರವಾಗಿ ಮೈದಾನಕ್ಕೆ ತೆರಳಲಿರುವ ಆಟಗಾರರು ಹೊನಲು ಬೆಳಕಿನಲ್ಲಿ ಸಂಜೆ ಐದು ಗಂಟೆ ನಂತರ ಪ್ರಾಕ್ಟೀಸ್ ಮಾಡಲಿದ್ದಾರೆ. ಹೋಟೆಲ್ ಕೊಠಡಿಗಳೆಲ್ಲವೂ ಮದುವೆ ಸಮಾರಂಭಗಳಿಗಾಗಿ ಬುಕ್ ಆಗಿರುವುದರಿಂದ ಆಟಗಾರರಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ ಸಿಕ್ಕಿಲ್ಲ.

ಹೀಗಾಗಿ ತಡವಾಗಿ ಕಟಕ್ ಗೆ ಬಂದಿಳಿಯಲಿರುವ ಆಟಗಾರರಿಗೆ ಅಭ್ಯಾಸ ನಡೆಸಲು ಸಮಯ ಸಿಗುತ್ತಿಲ್ಲ. ಇದರಿಂದಾಗಿ ಫ್ಲಡ್ ಲೈಟ್ ಬೆಳಕಿನಡಿಯಲ್ಲಿ  ನೆಟ್ ಅಭ್ಯಾಸ ನಡೆಸಲಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿಯೇ ಒರಿಸ್ಸಾ ಕ್ರಿಕೆಟ್ ಸಂಸ್ಥೆ ಹೋಟೆಲ್ ಕೊಠಡಿಗೆ ಹುಡುಕಾಟ ನಡೆಸಿದರೂ, ಆಗಲೇ ಎಲ್ಲವೂ ಬುಕ್ ಆಗಿದ್ದರಿಂದ ಈ ಅವ್ಯವಸ್ಥೆಯಾಗಿದೆ.

ಇದೇ ವೇಳೆ ಭಾರತೀಯ ಆಟಗಾರರಿಗಾಗಿ ಕಳೆದ ಕೆಲವು ದಿನಗಳಿಂದ ಬೀಡು ಬಿಟ್ಟಿದ್ದ ಕೆಲವು ಅಂತಾರಾಷ್ಟ್ರೀಯ ಹಾಕಿ ಆಟಗಾರರಿಗೆ ಕೊಠಡಿ ತೆರವುಗೊಳಿಸಲು ಸೂಚಿಸಲಾಗಿದೆ ಎಂಬ ವರದಿಗಳನ್ನು ಹೋಟೆಲ್  ವ್ಯವಸ್ಥಾಪಕರು ತಳ್ಳಿ ಹಾಕಿದ್ದಾರೆ. ಅವರ ನಿಗದಿ ದಿನ ಮುಕ್ತಾಯಗೊಂಡಿದ್ದರಿಂದ ಅವರು ಕೊಠಡಿ ತೆರವುಗೊಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಗಿಂತ ಕುಟುಂಬವೇ ದೊಡ್ಡದು ಎಂದ ಈ ಕ್ರಿಕೆಟಿಗ