Select Your Language

Notifications

webdunia
webdunia
webdunia
webdunia

ಐಪಿಎಲ್ ಗಿಂತ ಕುಟುಂಬವೇ ದೊಡ್ಡದು ಎಂದ ಈ ಕ್ರಿಕೆಟಿಗ

ಐಪಿಎಲ್ ಗಿಂತ ಕುಟುಂಬವೇ ದೊಡ್ಡದು ಎಂದ ಈ ಕ್ರಿಕೆಟಿಗ
Mumbai , ಬುಧವಾರ, 18 ಜನವರಿ 2017 (09:10 IST)
ಮುಂಬೈ: ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ ಇತ್ತೀಗಷ್ಟೇ ಮೊದಲ ಮಗುವಿನ ಅಪ್ಪನಾಗುತ್ತಿರುವ ಕಾರಣಕ್ಕೆ ಏಕದಿನ ಪಂದ್ಯಕ್ಕೆ ಭಾರತಕ್ಕೆ ಬರಲು ತಡ ಮಾಡಿದವರು. ಅಂತಿಪ್ಪಾ ಜೋ  ರೂಟ್ ಇದೀಗ ನನಗೆ ಐಪಿಎಲ್ ಉಸಾಬರಿಯೇ ಬೇಡ. ಅದಕ್ಕಿಂತ ದೊಡ್ಡದು ನನಗೆ ಕುಟುಂಬ ಎಂದಿದ್ದಾರೆ.

ಪ್ರಸಕ್ತಿ ಕ್ರಿಕೆಟ್ ಜಗತ್ತಿನಲ್ಲಿ ಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರೆನಿಸಿಕೊಂಡಿರುವ ರೂಟ್ ರನ್ನು ಹಲವು ಐಪಿಎಲ್ ಫ್ರಾಂಚೈಸಿಗಳು ಸಂಪರ್ಕಿಸಿ ದೊಡ್ಡ ಮೊತ್ತದ ಅಮಿಷ ಒಡ್ಡಿದ್ದರು ಎನ್ನಲಾಗಿದೆ. ಆದರೆ ಹಣಕ್ಕಿಂತ ಇತ್ತೀಚೆಗಷ್ಟೇ ಹುಟ್ಟಿದ ಮಗನ ಜತೆ ಕಾಲ ಕಳೆಯಲು ಇಚ್ಛಿಸುವುದಾಗಿ ರೂಟ್ ಆಫರ್ ತಿರಸ್ಕರಿಸಿದ್ದಾರೆ.

“ಮುಂದಿನ ಹಲವು ದಿನಗಳ ಕಾಲ ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಮನೆಯಿಂದ ದೂರವಿರಲಿದ್ದೇನೆ. ಹಾಗಾಗಿ ಇದು ನನ್ನ ಮಗನೊಂದಿಗೆ ಕಾಲ ಕಳೆಯಲು ಸಿಕ್ಕಿರುವ ಬ್ರೇಕ್. ಅದನ್ನು ಕಳೆದುಕೊಂಡು ಹಣಕ್ಕಾಗಿ ಐಪಿಎಲ್ ಆಡಲಾರೆ. ಹಣಕ್ಕಿಂತ ಕುಟುಂಬವೇ ದೊಡ್ಡದು” ಎಂದು ರೂಟ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಸರಣಿಗೂ ಮೊದಲೇ ನಿವೃತ್ತಿಯಾದ ಆಸ್ಟ್ರೇಲಿಯಾದ ಈ ಕ್ರಿಕೆಟಿಗ!