Select Your Language

Notifications

webdunia
webdunia
webdunia
webdunia

ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದು ಅಚ್ಚರಿ: ಹಾರ್ದಿಕ್ ಪಾಂಡ್ಯ

Hardik Pandya
Mumbai , ಗುರುವಾರ, 3 ನವೆಂಬರ್ 2016 (10:14 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು ನನಗೆ ಸಂತಸವಾಗಿದೆ. ಇಷ್ಟು ಬೇಗ ಟೆಸ್ಟ್ ತಂಡಕ್ಕೆ ಆಯ್ಕೆಯಾಗುತ್ತೇನೆಂದು ಅಂದುಕೊಂಡಿರಲಿಲ್ಲ ಎಂದು ಭಾರತೀಯ ಬೌಲರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಪ್ರಸಕ್ತ ಕರ್ನಾಟಕದ ಸ್ಟುವರ್ಟ್ ಬಿನ್ನಿಗಿಂತ ಹಾರ್ದಿಕ್ ಬೆಸ್ಟ್ ಬೌಲರ್ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಹೇಳಿದ್ದರು. ಹೀಗಾಗಿ ಏಕದಿನ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಪಾಂಡ್ಯಗೆ ಮಣೆ ಹಾಕಲಾಗಿತ್ತು.

ವಿಶೇಷವೆಂದರೆ ಹಾರ್ದಿಕ್ ಪಾಂಡ್ಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದು ಕೇವಲ ಒಂದು ತಿಂಗಳಾಗಿದೆಯಷ್ಟೆ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಅವರು ಏಕದಿನ ಪಂದ್ಯಕ್ಕೆ ಕಾಲಿಟ್ಟ ದಿನವೇ ಮಾಜಿ ಆಲ್ ರೌಂಡರ್ ಕಪಿಲ್ ದೇವ್ ಕೂಡಾ ಕ್ರಿಕೆಟ್ ಗೆ ಪದಾರ್ಪಣೆ ದಿನವೇ ಆಗಿತ್ತಂತೆ.

ಕಪಿಲ್ ತಮಗೆ ಏಕದಿನ ಪಂದ್ಯದ ಕ್ಯಾಪ್ ನೀಡುವಾಗ ಈ ವಿಷಯ ಹೇಳಿದ್ದರು ಎಂದು ಹಾರ್ದಿಕ್ ಹೇಳಿಕೊಂಡಿದ್ದಾರೆ. ಹೀಗಾಗಿ ಅವರಂತಹ ಉತ್ತಮ ಆಲ್ ರೌಂಡರ್ ಆಗಲಿ ಎಂಬುದು ನಮ್ಮ ಹಾರೈಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೈನಾ ನೆಹ್ವಾಲ್ ಗೆ ವೃತ್ತಿ ಜೀವನದ ಭಯ