ನವದೆಹಲಿ: ಭಾರತದ ಖ್ಯಾತ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇತ್ತೀಚೆಗೆ ಗಾಯದ ಕಾರಣದಿಂದ ಕಣದಲ್ಲಿ ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ. ಒಂದು ವೇಳೆ ಆಡಿದರೂ ಮೊದಲಿನಂತೆ ಗೆಲುವು ಸಿಗತ್ತಿಲ್ಲ.
ಆಗಾಗ ಗಾಯಕ್ಕೊಳಗಾಗುತ್ತಿರುವ ಸೈನಾಗೆ ಈಗ ತಮ್ಮ ವೃತ್ತಿ ಜೀವನ ಅರ್ಧದಲ್ಲೇ ಕೊನೆಗಾಣಬಹುದು ಎಂಬ ಭಯ ಕಾಡುತ್ತಿದೆಯಂತೆ. ಒಲಿಂಪಿಕ್ಸ್ ನಲ್ಲಿ ಎರಡನೇ ಸುತ್ತಿನಲ್ಲಿ ಗಾಯಗೊಂಡು ನಂತರ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಸೈನಾ ತುಂಬಾ ದಿನದಿಂದ ಕಣಕ್ಕಿಳಿದಿರಲಿಲ್ಲ.
ಪಿ ವಿ ಸಿಂಧು ಬಂದ ಮೇಲೆ ಹಲವು ಜನ ಸೈನಾ ಆಟವನ್ನು ಮರೆತೇ ಬಿಟ್ಟರು. ಸೈನಾ ವೃತ್ತಿ ಜೀವನ ಮುಗಿಯಿತು ಎಂದರು. ನನಗೂ ಇದೇ ಕಳವಳ ಕಾಡುತ್ತಿದೆ. ಗಾಯದ ಕಾರಣದಿಂದ ಮೊದಲಿನ ಹಾಗೆ ಆಡಲು ಸಾಧ್ಯವಾಗುತ್ತಿಲ್ಲ. ಜನ ಕೂಡಾ ನನ್ನ ಕೆರಿಯರ್ ಮುಗಿದೇ ಹೋಯಿತು ಎಂದು ಮಾತಾಡಿಕೊಳ್ಳುತ್ತಿದ್ದಾರೆ ಎಂದು ಸೈನಾ ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಜನ ಮಾತಾಡಿಕೊಳ್ಳುವ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಕಿರು ಅವಧಿಗೆ ಯೋಜನೆ ರೂಪಿಸಿಕೊಳ್ಳುತ್ತೇನೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ