Publish Date: Sat, 26 Sep 2020 (09:07 IST)
Updated Date: Sat, 26 Sep 2020 (09:09 IST)
ದುಬೈ: ಐಪಿಎಲ್ 13 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋತಿದ್ದಕ್ಕೆ ಕೊಹ್ಲಿಯನ್ನು ಟೀಕಿಸುವಾಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನು ಉಲ್ಲೇಖಿಸಿ ಟೀಕೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಕೊಹ್ಲಿಯ ಕಳಪೆ ಬ್ಯಾಟಿಂಗ್ ಟೀಕಿಸುವ ಭರದಲ್ಲಿ ಗವಾಸ್ಕರ್ ‘ಬಹುಶಃ ಈತ ಲಾಕ್ ಡೌನ್ ಸಮಯದಲ್ಲಿ ಪತ್ನಿ ಅನುಷ್ಕಾ ಬೌಲಿಂಗ್ ಗೆ ಆಡುವುದನ್ನು ಮಾತ್ರ ಅಭ್ಯಾಸ ಮಾಡಿರಬೇಕು’ ಎಂದು ದ್ವಂದಾರ್ಥ ಹೇಳಿಕೆ ನೀಡಿದ್ದರು. ಇದೀಗ ಸ್ವತಃ ಅನುಷ್ಕಾ ಕೆಂಗಣ್ಣಿಗೆ ಗುರಿಯಾಗಿದೆ.
ಮಿಸ್ಟರ್ ಗವಾಸ್ಕರ್ ನಿಮಗೆ ವಿರಾಟ್ ಮೇಲೆ ಟೀಕೆ ಮಾಡಲು ಹಲವು ವಿಷಯಗಳಿರಬಹುದು. ಆದರೆ ಅದಕ್ಕೆ ಅನವಶ್ಯಕವಾಗಿ ನನ್ನ ಹೆಸರು ಬಳಸುವ ಅಗತ್ಯವಿರಲಿಲ್ಲ. ನಿಮಗೆ ಕ್ರಿಕೆಟ್ ನಲ್ಲಿ ಒಂದು ಗೌರವಯುತ ಸ್ಥಾನವಿದೆ. ಅದನ್ನು ಕಳೆದುಕೊಳ್ಳಬೇಡಿ’ ಎಂದು ಸುದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ. ಅನುಷ್ಕಾ ಕಾಮೆಂಟ್ ಮಾಡಿದ ಬಳಿಕ ಪ್ರತಿಕ್ರಿಯಿಸಿರುವ ಗವಾಸ್ಕರ್ ಜನ ನನ್ನ ಕಾಮೆಂಟ್ ನ್ನು ತಿರುಚಿದ್ದಾರೆ. ನಾನು ಕೊಹ್ಲಿ ಪ್ರದರ್ಶನಕ್ಕೆ ಅನುಷ್ಕಾರನ್ನು ದೂರಿಲ್ಲ ಎಂದು ಸಮಾಧಾನಗೊಳಿಸುವ ಪ್ರಯತ್ನ ನಡೆಸಿದ್ದಾರೆ.