ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರಿಗೆ ಕ್ರಿಕೆಟ್ ಲೋಕದಲ್ಲಿ ಬಹಳ ಮನ್ನಣೆ ಇದೆ. ಆದರೆ ಕ್ರಿಕೆಟ್ ಇನ್ನು ಅಂಬೆಗಾಲಿಕ್ಕುತ್ತಿರುವ ಅಮೇರಿಕಾದಲ್ಲಿ ಅವರಿಗೆ ಬಹಳ ನೋವನ್ನುಂಟು ಮಾಡುವ ಅನುಭವವಾಗಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದ ಅಂತಿಮ ಟಿ20 ಪಂದ್ಯವನ್ನು ವೀಕ್ಷಿಸಲು ಫ್ಲೋರಿಡಾಗೆ ಬಂದಿದ್ದ ಅವರಿಗೆ ಕ್ರೀಡಾಂಗಣ ಪ್ರವೇಶವನ್ನು ನಿರಾಕರಿಸಲಾಗಿದೆ.
ಅಮೇರಿಕಾದಲ್ಲಿ ಕ್ರಿಕೆಟ್‌ನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಆದರೆ ಪಂದ್ಯಾವಳಿಯ ಎರಡನೆಯ ಪಂದ್ಯವನ್ನು ವೀಕ್ಷಿಸಲು ಬಂದ ಕ್ರಿಕೆಟ್ ದಂತಕಥೆ ಗವಾಸ್ಕರ್ ಅವರನ್ನು ಗುರುತಿಸದ ರಕ್ಷಣಾ ಸಿಬ್ಬಂದಿ ಪ್ರವೇಶವನ್ನು ನಿರಾಕರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವವರ ಸಾಲಿನಲ್ಲಿ ಗುರುತಿಸಿಕೊಳ್ಳುವ ಲಿಟ್ಟಲ್ ಮಾಸ್ಟರ್, ಅಧಿಕೃತ ವೀಕ್ಷಕಕ ವಿವರಣೆಕಾರ ಗವಾಸ್ಕರ್ ಅವರಿಗಾದ ಈ ಅಪಮಾನಕ್ಕೆ ಭಾರಿ ಖಂಡನೆ ವ್ಯಕ್ತವಾಗಿದೆ.
ಅಮೇರಿಕಾದಲ್ಲಿ ಬಿಗಿಯಾದ ರಕ್ಷಣಾ ವ್ಯವಸ್ಥೆ ಇದ್ದು, ಅದರಲ್ಲೂ ಸಾರ್ವಜನಿಕ ಸ್ಥಳಗಳಾದ ವಿಮಾನ ನಿಲ್ದಾಣ, ಕ್ರೀಡಾಂಗಣಕ್ಕೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗುತ್ತದೆ. ವಿಶ್ವವಿಖ್ಯಾತ ಚಲನಚಿತ್ರ ನಟ, ಸೂಪರ್ ಸ್ಟಾರ್ ಶಾರುಖ್ ಅವರಿಗೂ ಇತ್ತೀಚಿಗೆ ಲಾಂಜ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಇಂತದಹೇ ಕೆಟ್ಟ ಅನುಭವವಾಗಿತ್ತು.