ರಿಯೋ ಓಲಂಪಿಕ್ಸ್ನಲ್ಲಿ ಬೆಳ್ಳಿ ಬಾಚಿದ ಪಿ.ವಿ ಸಿಂಧು, ಅವರ ಯಶಸ್ವಿ ಕೋಚ್ ಗೋಪಿಚಂದ್, ಕಂಚು ಗೆದ್ದ ಸಾಕ್ಷಿ ಮಲಿಕ್ ಮತ್ತು ಜಿಮ್ನಾಸ್ಟಿಕ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದ ದೀಪಾ ಕರ್ಮಾಕರ್ ಅವರಿಗೆ ಶನಿವಾರ ಬಿಎಮ್ಡಬ್ಲ್ಯೂ ಕಾರ್ನ್ನು ಉಡುಗೊರೆಯಾಗಿ ನೀಡಲಾಯಿತು.
ಹೈದರಾಬಾದ್ ನ ಗಚ್ಚಿಗೌಲಿಯಲ್ಲಿರುವ ಪುಲ್ಲೇಲಾ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಓಲಂಪಿಕ್ಸ್ ಹೀರೋಗಳಿಗೆ ಶನಿವಾರ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕಾರನ್ನು ಪ್ರದಾನ ಮಾಡಿದರು.
ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾದ ಡಾಮುಂಡೇಶ್ವರನಾಥ್ ಓಲಂಪಿಕ್ಸ್ ಸಾಧಕರಿಗೆ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಈ ಹಿಂದೆ ಘೋಷಿಸಿದ್ದರು. ಅಂತೆಯೇ ತಮ್ಮ ಆಪ್ತ ಸ್ನೇಹಿತ ಸಚಿನ್ ಕೈಯ್ಯಲ್ಲಿ ದುಬಾರಿ ಕಾರ್ ಕೀಯನ್ನು ಕ್ರೀಡಾಪಟುಗಳಿಗೆ ಹಸ್ತಾಂತರಿಸಿದರು.