ಮುಂದಿನ ಭಾರತೀಯ ಕ್ರಿಕೆಟ್ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ಅವರಿಗೆ ಬ್ಯಾಟಿಂಗ್ ಲೆಜೆಂಡ್ ಸುನಿಲ್ ಗವಾಸ್ಕರ್ ಬೆಂಬಲಿಸಿದ್ದಾರೆ.ಬಿಸಿಸಿಐ ಕೋಚ್ ಬದಲಾವಣೆ ಬಯಸಿದ್ದರೆ ರಾಹುಲ್ ದ್ರಾವಿಡ್ ಅವರು ಆ ಹುದ್ದೆಗೆ ಸೂಕ್ತರಾಗುತ್ತಾರೆ ಎಂದು ಗವಾಸ್ಕರ್ ಹೇಳಿದರು.
ಬಿಸಿಸಿಐ ಕೋಚ್ ಬದಲಾವಣೆಗೆ ಬಯಸುತ್ತಿದ್ದರೆ ರಾಹುಲ್ ದ್ರಾವಿಡ್‌ಗಿಂತ ಉತ್ತಮ ಕೋಚ್ ಬೇರೊಬ್ಬರಿಲ್ಲ ಎಂದು ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಅಂಡರ್ -19 ಭಾರತ ಕೋಚ್ ಮತ್ತು ಪ್ರಸಕ್ತ ಡೆಲ್ಲಿ ಡೇರ್‌ಡೆವಿಲ್ ಮಾರ್ಗದರ್ಶಕ ದ್ರಾವಿಡ್ ಅವರು ಈ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಬೆಂಬಲಿಸಿದ್ದಾರೆ.
ದ್ರಾವಿಡ್ ಕ್ರಿಕೆಟ್ ಬಗ್ಗೆ ಒಳ್ಳೆಯ ಜ್ಞಾನ ಹೊಂದಿದ್ದು, ತುಂಬಾ ಅನುಭವಿ ಮತ್ತು ಎಲ್ಲಾ ಮೂರು ಸ್ವರೂಪದ ಆಟಗಳ ಬಗ್ಗೆ ಅವರಿಗೆ ತಿಳಿವಳಿಕೆಯಿದೆ ಎಂದು ಪಾಂಟಿಂಗ್ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ