ಅಡಾಂ ಜಂಪಾ ಮತ್ತು ಅಶೋಕ್ ದಿಂಡಾ ತಲಾ ಮೂರು ವಿಕೆಟ್ ಕಬಳಿಕೆ ಮತ್ತು ಅಜಿಂಕ್ಯಾ ರಹಾನೆ ಅವರ ಅಜೇಯ 42 ರನ್ ನೆರವಿನಿಂದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಡಕ್‌ವರ್ತ್ ಲೆವಿಸ್ ನಿಯಮದಡಿ 19 ರನ್‌ಗಳಿಂದ ಗೆದ್ದಿದೆ.
ಎಡಗೈ ಸ್ಪಿನ್ನರ್ ಜಂಪಾ(3/21) ಮತ್ತು ವೇಗಿ ದಿಂಡಾ(3/20) ಪುಣೆ ಪರ ಶಿಸ್ತಿನ ಬೌಲಿಂಗ್ ಪ್ರದರ್ಶನ ಮಾಡಿ ಡೇರ್‌ಡೆವಿಲ್ಸ್ ತಂಡವನ್ನು 6 ವಿಕೆಟ್‌ಗೆ 121ರ ಅಲ್ಪಮೊತ್ತಕ್ಕೆ ಔಟ್ ಮಾಡಿದರು.
ಬಳಿಕ ರಹಾನೆ 42 ಅಜೇಯ ರನ್ ನೆರವಿನಿಂದ ತಂಡಕ್ಕೆ ಗೆಲುವನ್ನು ತಂದಿತ್ತರು. ರಹಾನೆ ನಾಲ್ಕು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಮೂಲಕ 36 ಎಸೆತಗಳಲ್ಲಿ 42 ರನ್ ಬಾರಿಸಿ ಇನ್ನಿಂಗ್ಸ್ ಕಟ್ಟಿದರು. ರೈಸಿಂಗ್ ಪುಣೆ 11 ಓವರುಗಳಲ್ಲಿ 76 ರನ್‌ಗಳಾಗಿದ್ದಾಗ ಎರಡನೇ ಬಾರಿ ಮಳೆರಾಯನ ಅಡ್ಡಿಯಿಂದ ಅಂಪೈರ್‌ಗಳು ಆಟವನ್ನು ನಿಲ್ಲಿಸಿದರು. ಮೊದಲ ಮಳೆಯ ಅಡ್ಡಿಯುಂಟಾದಾಗ ಪುಣೆ 8.2 ಓವರುಗಳಲ್ಲಿ 1 ವಿಕೆಟ್‌ಗೆ 57 ರನ್ ಗಳಿಸಿತ್ತು.
ಸುಮಾರು ಒಂದು ಗಂಟೆಯ ವಿರಾಮದ ಬಳಿಕ ಇನ್ನೆರಡು ಓವರುಗಳನ್ನು ಆಡುವಷ್ಟರಲ್ಲಿ ಮಳೆ ಪುನಃ ಬರಲಾರಂಭಿಸಿತು. ರಹಾನೆ ಮತ್ತು ಬೈಲಿ 16 ಎಸೆತಗಳಲ್ಲಿ 19 ರನ್ ಸೇರಿಸಿ ಸ್ಕೋರನ್ನು 76ಕ್ಕೆ ತಂದು ನಿಲ್ಲಿಸಿದ್ದರು.
ಮಳೆ ಸತತವಾಗಿ ಬೀಳಲಾರಂಭಿಸಿದಾಗ, ಡಕ್‌ವರ್ತ್ ಲೆವಿಸ್ ವಿಧಾನದ ಮೂಲಕ ಪುಣೆಯ ಗೆಲುವನ್ನು ಘೋಷಿಸಲಾಯಿತು.
ಡೇರ್‌ಡೆವಿಲ್ಸ್ ತಂಡಕ್ಕೆ ಈ ನಷ್ಟದಿಂದ ಪ್ಲೇ ಆಫ್ ಪ್ರವೇಶಿಸುವುದು ಕಷ್ಟವಾಗಿದ್ದು, ಅದು 12 ಪಂದ್ಯಗಳಲ್ಲಿ 12 ಪಾಯಿಂಟ್‌ಗಳಿಂದ 6ನೇ ಸ್ಥಾನದಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ