ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತವನ್ನು ಮುಟ್ಟಿರುವ ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಅವರ ಕೈಬೆರಳುಗಳ ನಡುವೆ ಚರ್ಮ ಸೀಳುವಿಕೆಯಿಂದ ಅನೇಕ ಹೊಲಿಗೆಗಳನ್ನು ಹಾಕಲಾಗಿದೆ. ಬೆಂಗಳೂರಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಇನ್ನೊಂದು ಗೆಲ್ಲಲೇಬೇಕಾದ ಪಂದ್ಯವನ್ನು ರಾಯಲ್ ಆಡಲಿದೆ.
ಕೊಹ್ಲಿ ನೈಟ್ ರೈಡರ್ಸ್ ವಿರುದ್ಧ ಫೀಲ್ಡಿಂಗ್ ಮಾಡುವಾಗ ಡೈವ್ ಮಾಡಿ ಕ್ಯಾಚ್‌ಗೆ ಯತ್ನಿಸುವಾಗ ಎಡಗೈ ಬೆರಳಿನಲ್ಲಿ ಚರ್ಮ ಸೀಳಿತ್ತು. ವೈದ್ಯಕೀಯ ನೆರವು ಪಡೆಯಲು ಅವರು ಮೈದಾನವನ್ನು ಸಂಕ್ಷಿಪ್ತ ಕಾಲ ತೊರೆದು ಪುನಃ ಫೀಲ್ಡಿಂಗ್‌ಗೆ ಹಿಂತಿರುಗಿದ ಬಳಿಕ ಇನ್ನೊಂದು ಮನೋಜ್ಞ ಆಟದ ಮೂಲಕ ಆರ್‌ಸಿಬಿಯ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿದ್ದರು.
ನನಗೆ 7-8 ಹೊಲಿಗೆಗಳನ್ನು ಹಾಕಬೇಕಾಗಬಹುದು ಎಂದು ಕೊಹ್ಲಿ ಪಂದ್ಯದ ಬಳಿಕ ತಿಳಿಸಿದರು. ಎದುರಾಳಿ ನಾಯಕ ಆಡುವುದಿಲ್ಲವೆಂದು ಕಿಂಗ್ಸ್ ಇಲೆವನ್ ಭಾವಿಸಿದ್ದರೆ ಅದಕ್ಕೆ ನಿರಾಶೆ ಕಟ್ಟಿಟ್ಟ ಬುತ್ತಿ. ಏಕೆಂದರೆ ಆರ್‌ಸಿಬಿ ಮ್ಯಾನೇಜರ್ ಅವಿನಾಶ್ ವೈದ್ಯ ಭಾರತದ ನಂಬರ್ ಒನ್ ಬ್ಯಾಟ್ಸ್‌ಮನ್ ಬುಧವಾರ ಆಡಲಿದ್ದಾರೆಂದು ತಿಳಿಸಿದರು.
ಕಿಂಗ್ಸ್ ಇಲೆವನ್ ಈಗಾಗಲೇ ಪ್ಲೇ ಆಫ್ ಪ್ರವೇಶದಿಂದ ಹೊರಬಿದ್ದಿದ್ದು, ಶಿಷ್ಟಾಚಾರಗಳನ್ನು ಪೂರ್ಣಗೊಳಿಸುವ ಭಾವನೆ ಹೊಂದಿದ್ದರೆ, ಆರ್‌ಸಿಬಿ ಇನ್ನೊಂದು ದೊಡ್ಡ ಜಯದ ಮೂಲಕ ಪಾಯಿಂಟ್ ಟ್ಯಾಲಿಯನ್ನು 14ಕ್ಕೆ ಒಯ್ಯಲು ನಿರ್ಧರಿಸಿದೆ.
ಆರ್‌ಸಿಬಿ ಪ್ರಸಕ್ತ 5ನೇ ಸ್ಥಾನದಲ್ಲಿದ್ದು ಎರಡು ಗೆಲುವುಗಳು ಅದನ್ನು ಪ್ಲೇಆಫ್ ಹಂತಕ್ಕೆ ಮುಟ್ಟಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ