Publish Date: Mon, 11 Jan 2021 (09:11 IST)
Updated Date: Mon, 11 Jan 2021 (09:14 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ವೇಳೆ ಆಸೀಸ್ ಬೆಂಬಲಿತ ಪ್ರೇಕ್ಷಕರು ಭಾರತೀಯ ಕ್ರಿಕೆಟಿಗರ ಮೇಲೆ ಜನಾಂಗೀಯ ನಿಂದನೆ ಮಾಡಿ ಅಪಮಾನ ಮಾಡಿದ್ದರು. ಇದೀಗ ಆಸೀಸ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಗೆ ಕ್ರೀಸ್ ನಲ್ಲಿ ಕಾಟ ಕೊಟ್ಟಿದ್ದಾರೆ.
ರಿಷಬ್ ಬ್ಯಾಟಿಂಗ್ ಮಾಡುತ್ತಿದ್ದಾಗ ಪಕ್ಕದಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಬ್ಯಾಟ್ಸ್ ಮನ್ ಗಳ ಗಾರ್ಡ್ (ಬ್ಯಾಟಿಂಗ್ ಮಾಡುವಾಗ ಗುರುತಿಗೆ ಹಾಕುವ ಗೆರೆ) ಅಳಿಸಿ ವಿಕೃತಿ ಮೆರೆದಿದ್ದಾರೆ. ಅವರ ಈ ಕೃತ್ಯ ಸ್ಟಂಪ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಮಿತ್ ರ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.