Select Your Language

Notifications

webdunia
webdunia
webdunia
webdunia

ಸೋಲು ತಪ್ಪಿಸಿಕೊಳ್ಳಲು ಟೀಂ ಇಂಡಿಯಾ ಹರಸಾಹಸ

ಸೋಲು ತಪ್ಪಿಸಿಕೊಳ್ಳಲು ಟೀಂ ಇಂಡಿಯಾ ಹರಸಾಹಸ
ಸಿಡ್ನಿ , ಭಾನುವಾರ, 10 ಜನವರಿ 2021 (13:41 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಲು ಟೀಂ ಇಂಡಿಯಾ ಹರಸಾಹಸ ಪಡುತ್ತಿದೆ. ನಾಲ್ಕನೇ ದಿನದಂತ್ಯಕ್ಕೆ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.


 

ರೋಹಿತ್ ಶರ್ಮಾ ಮತ್ತು ಶಬ್ನಂ ಗಿಲ್ ಉತ್ತಮ ಆರಂಭ ಒದಗಿಸಿದರು. ಆದರೆ ಇಬ್ಬರೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು. ರೋಹಿತ್ ಅರ್ಧಶತಕ (52) ಗಳಿಸಿದರೆ ಶಬ್ನಂ 31 ರನ್ ಗಳ ಕಾಣಿಕೆ ನೀಡಿದರು. ಇದೀಗ ಕ್ರೀಸ್ ನಲ್ಲಿ 9 ರನ್ ಗಳಿಸಿರುವ ಚೇತೇಶ್ವರ ಪೂಜಾರ ಹಾಗೂ 4 ರನ್ ಗಳಿಸಿರುವ ಅಜಿಂಕ್ಯಾ ರೆಹಾನೆ ಇದ್ದಾರೆ. ಭಾರತಕ್ಕೆ ಈ ಪಂದ್ಯ ಗೆಲ್ಲಲು ಇನ್ನೂ 309 ರನ್ ಗಳಿಸಬೇಕಿದೆ. ಹೀಗಾಗಿ ಪಂದ್ಯ ಗೆಲ್ಲಬೇಕಾದರೆ ನಾಳೆ ಬಿರುಸಿನ ಆಟಕ್ಕೆ ಕೈ ಹಾಕಬೇಕು ಇಲ್ಲವೇ ನಿಧಾನಗತಿಯ ಆಟದ ಮೂಲಕ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಸದ್ಯದ ಪರಿಸ್ಥಿತಿ ನೋಡಿದರೆ ಅವೆರಡೂ ಕಷ್ಟವೇ. ಹೀಗಾಗಿ ನಾಳೆ ಅಂತಿಮ ದಿನ ಭಾರತ ಸೋಲುಣ್ಣುವ ಸಾಧ‍್ಯತೆಯೇ ಹೆಚ್ಚು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಗೆಲುವಿಗೆ 407 ರನ್ ಗಳ ಗುರಿ ನೀಡಿದ ಆಸ್ಟ್ರೇಲಿಯಾ