Publish Date: Sun, 10 Jan 2021 (09:14 IST)
Updated Date: Sun, 10 Jan 2021 (09:15 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪ್ರಸಕ್ತ ಭರ್ಜರಿ ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿರುವ ಟೀಂ ಇಂಡಿಯಾ ಯುವ ವೇಗಿ ಶಬ್ನಂ ಗಿಲ್ ಬಗ್ಗೆ ಟ್ವಿಟರಿಗರೊಬ್ಬರು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ತಮಿಳು ಸಿನಿಮಾವೊಂದರಲ್ಲಿ ಮದುವೆ ಮಾತುಕತೆ ನಡೆಯುವ ಫೋಟೋವನ್ನು ಪ್ರಕಟಿಸಿ, ಈ ಸರಣಿ ಮುಗಿದ ಮೇಲೆ ಶಬ್ನಂ ಗಿಲ್ ಕುಟುಂಬಸ್ಥರು ಸಚಿನ್ ತೆಂಡುಲ್ಕರ್ ಮನೆಗೆ ಹೆಣ್ಣು ಕೇಳಲು ಹೀಗೆ ಹೋಗಬಹುದು ಎಂದು ಟ್ರೋಲ್ ಮಾಡಿದ್ದಾರೆ. ಇತ್ತೀಚೆಗೆ ಶಬ್ನಂ ಮತ್ತು ಸಚಿನ್ ಪುತ್ರಿ ಸಾರಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಇದಕ್ಕೆ ಇಬ್ಬರ ಇನ್ ಸ್ಟಾಗ್ರಾಂನಲ್ಲಿ ವಿನಿಮಯವಾದ ಸಂದೇಶ ಕಾರಣ. ಇದೇ ಗಾಸಿಪ್ ನ್ನಿಟ್ಟುಕೊಂಡು ಟ್ವಿಟರಿಗರೊಬ್ಬರು ಈ ರೀತಿ ತಮಾಷೆ ಮಾಡಿದ್ದಾರೆ.