Publish Date: Sat, 09 Jan 2021 (10:33 IST)
Updated Date: Sat, 09 Jan 2021 (10:35 IST)
ಸಿಡ್ನಿ: ಚೇತೇಶ‍್ವರ ಪೂಜಾರ ಎಂದರೆ ಪಕ್ಕಾ ಟೆಸ್ಟ್ ಶೈಲಿಯ ಬ್ಯಾಟ್ಸ್ ಮನ್. ಅವರು ನಿಧಾನಗತಿಯ ಆಟಕ್ಕೇ ಫೇಮಸ್ಸು. ಇದೀಗ ಪೂಜಾರ ನಿಧಾನಗತಿಯ ಅರ್ಧಶತಕ ಗಳಿಸಿ ದಾಖಲೆ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಪೂಜಾರ 50 ರನ್ ಗಳಿಸಲು ಬರೋಬ್ಬರಿ 174 ಎಸೆತ ಎದುರಿಸಿದ್ದಾರೆ. ಇದು ಅವರ ಅತ್ಯಂತ ನಿಧಾನಗತಿಯ ಅರ್ಧಶತಕವಾಗಿದೆ. ಆದರೆ ಭಾರತಕ್ಕೆ ಅವರ ಈ ಇನಿಂಗ್ಸ್ ಅತ್ಯಂತ ಉಪಯುಕ್ತವಾಗಿತ್ತು.