Publish Date: Sat, 09 Jan 2021 (09:15 IST)
Updated Date: Sat, 09 Jan 2021 (09:17 IST)
ಸಿಡ್ನಿ: ಆಸ್ಟ್ರೇಲಿಯನ್ನರು ಮೈದಾನದಲ್ಲಿ ಎದುರಾಳಿಗಳನ್ನು ಸ್ಲೆಡ್ಜಿಂಗ್ ಮಾಡುವುದರಲ್ಲಿ ನಿಸ್ಸೀಮರು. ಈಗ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲೂ ಅಸ್ಸೀ ಆಟಗಾರರು ಅದನ್ನೇ ಮುಂದುವರಿಸಿದ್ದಾರೆ.
ಬ್ಯಾಟ್ಸ್ ಮನ್ ಬಳಿಯೇ ಇದಕ್ಕೆಂದೇ ಲಬುಶೇನ್ ರನ್ನು ಆಸ್ಟ್ರೇಲಿಯಾ ಫೀಲ್ಡಿಂಗ್ ಗೆ ನಿಲ್ಲಿಸಿದೆ. ನಿನ್ನೆಯ ದಿನವಿಡೀ ಅವರು ಭಾರತೀಯ ಬ್ಯಾಟ್ಸ್ ಮನ್ ಗಳನ್ನು ಮಾತನಾಡಿಸುತ್ತಾ ಬೇಕೆಂದೇ ಬ್ಯಾಟಿಂಗ್ ಗೆ ಗಮನ ಕೊಡಲಾಗದಂತೆ ಮಾಡುತ್ತಿದ್ದರು. ಅದರಲ್ಲೂ ರೋಹಿತ್ ಶರ್ಮಾಗೆ ನೀನು 14 ದಿನ ಕ್ವಾರಂಟೈನ್ ನಲ್ಲಿ ಏನು ಮಾಡಿದೆ? ನಿನ್ನ ಫೇವರಿಟ್ ಬ್ಯಾಟ್ಸ್ ಮನ್ ಯಾರು? ಎಂದೆಲ್ಲಾ ಕೆಣಕುತ್ತಾ ಅವರ ಏಕಾಗ್ರತೆಗೆ ಭಂಗ ತಂದರು. ಬಹುಶಃ ಇದೇ ಕಾರಣಕ್ಕೆ ರೋಹಿತ್ ಬ್ಯಾಟಿಂಗ್ ಕಡೆಗೆ ಗಮನ ಕೊಡಲಾಗದೇ ವಿಕೆಟ್ ಕಳೆದುಕೊಂಡರು.
,
ತನ್ನದೇ ಫಾರ್ಮ್ ನ ಸ್ಟ್ರಾಬೆರಿ ಚಪ್ಪರಿಸಿದ ಧೋನಿ