Publish Date: Mon, 05 Jun 2017 (09:19 IST)
Updated Date: Mon, 05 Jun 2017 (09:21 IST)
ಲಂಡನ್: ಇಂಗ್ಲೆಂಡ್ ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಬೀಡುಬಿಟ್ಟಿರುವ ಶ್ರೀಲಂಕಾ ತಂಡಕ್ಕೆ ಮುಂದಿನ ಎದುರಾಳಿ ಭಾರತ. ಆದರೆ ಅದಕ್ಕಿಂತ ಮೊದಲೇ ಐಸಿಸಿ ಬಿಗ್ ಶಾಕ್ ನೀಡಿದೆ.
ಕಠಿಣ ಎದುರಾಳಿ ಭಾರತದ ಎದುರು ಆಡುವ ಮೊದಲೇ ಲಂಕಾ ತಂಡದ ಹಂಗಾಮಿ ನಾಯಕ ಉಪುಲ್ ತರಂಗಾಗೆ ಐಸಿಸಿ ಶಿಸ್ತು ಸಮಿತಿ ಎರಡು ಪಂದ್ಯಗಳ ನಿಷೇಧ ಶಿಕ್ಷೆ ವಿಧಿಸಿದೆ. ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾಗಿ ಓವರ್ ಪೂರೈಸಿದ್ದಕ್ಕೆ ಲಂಕಾ ನಾಯಕನಿಗೆ ಶಿಕ್ಷೆಯಾಗಿದೆ.
ಖಾಯಂ ನಾಯಕ ಆಂಜಲೋ ಮ್ಯಾಥ್ಯೂಸ್ ಗಾಯಗೊಂಡ ಹಿನ್ನಲೆಯಲ್ಲಿ ಆರಂಭಿಕ ಉಪುಲ್ ತರಂಗಾ ಹಂಗಾಮಿ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ತರಂಗಾಗೆ ನಿಷೇಧವಾಗಿರುವುದರಿಂದ ಚಾಂಪಿಯನ್ಸ್ ಟ್ರೋಪಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಎರಡೂ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.