Select Your Language

Notifications

webdunia
webdunia
webdunia
webdunia

ಟ್ರೈನಿಂಗ್ ಫೋಟೋ ಪ್ರಕಟಿಸಿದ ಸೌರವ್ ಗಂಗೂಲಿ: ಕಾಲೆಳೆದ ಸಚಿನ್ ತೆಂಡುಲ್ಕರ್

webdunia
ಭಾನುವಾರ, 12 ಜನವರಿ 2020 (09:20 IST)
ಮುಂಬೈ: ಸೌರವ್ ಗಂಗೂಲಿ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ ಫೋಟೋಗೆ ಗೆಳೆಯ ಸಚಿನ್ ತೆಂಡುಲ್ಕರ್ ಕಾಲೆಳೆದ ಪರಿ ಈಗ ಭಾರೀ ವೈರಲ್ ಆಗಿದೆ.


ವ್ಯಾಯಾಮ ಮಾಡುವ ಫೋಟೋ ಪ್ರಕಟಿಸಿದ ಗಂಗೂಲಿ ‘ಬೆಳ್ಳಂ ಬೆಳಿಗ್ಗೆ ತಣ್ಣನೆಯ ಗಾಳಿಯಲ್ಲಿ ವ್ಯಾಯಾಮ ಮಾಡುವುದು ಆರಾಮ ಕೊಡುತ್ತಿದೆ’ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಸಚಿನ್ ಸುಮ್ಮನೇ ಕೂರದೇ ಗೆಳೆಯನಿಗೆ. ‘ಏನು ವಿಷಯ ದಾದಿ?’ ಎಂದು ಕಾಲೆಳೆದಿದ್ದಾರೆ.

ಇದಕ್ಕೆ ಗಂಗೂಲಿ ಪ್ರತಿಕ್ರಿಯಿಸಿದ್ದು ನಿನಗೆ ನಮ್ಮ ಟ್ರೈನಿಂಗ್ ದಿನಗಳು ನೆನಪಿರಬೇಕಲ್ವಾ ಎಂದಿದ್ದಾರೆ. ಅಷ್ಟಕ್ಕೆ ಸುಮ್ಮನೆ ಕೂರದ ಸಚಿನ್ ಹೌದೌದು. ನೀನು ಟ್ರೈನಿಂಗ್ ನಲ್ಲಿ ಎಷ್ಟು ಆಸಕ್ತಿ ತೋರಿಸುತ್ತಿದೆ. ಅದರಲ್ಲೂ ‘ಸ್ಕಿಪ್ಪಿಂಗ್’ ಎಂದರೆ ನಿನಗೆ ಎಷ್ಟು ಇಷ್ಟ ಗೊತ್ತು ಬಿಡು ಎಂದು ತಮಾಷೆ ಮಾಡಿದ್ದಾರೆ. ಇವರಿಬ್ಬರ ಸೋಷಿಯಲ್ ಮೀಡಿಯಾ ತಮಾಷೆಗೆ ಸಾವಿರಾರು ಲೈಕ್ಸ್ ಗಳು ಬಂದಿವೆ.

Share this Story:

Follow Webdunia Hindi

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಗೆ ಜನ್ಮದಿನದ ಸಂಭ್ರಮ