Publish Date: Sun, 02 Jul 2017 (10:57 IST)
Updated Date: Sun, 02 Jul 2017 (11:00 IST)
ಮುಂಬೈ: ಕೋಚ್ ಆಗುವವರಿಗೆ ಉತ್ತಮವಾಗಿ ಪೇಪರ್ ಪ್ರೆಸೆಂಟೇಷನ್ ಮಾಡಲು ಬಂದರೆ ಸಾಲದು. ಆಟಗಾರರನ್ನು ಹೇಗೆ ನಿಭಾಯಿಸಬೇಕು ಎನ್ನುವುದು ತಿಳಿದಿರಬೇಕು. ಹೀಗೆಂದು ಹೇಳುವ ಮೂಲಕ ಭಾರತ ತಂಡದ ಕೋಚ್ ಆಯ್ಕೆ ಸಮಿತಿಯ ಸದಸ್ಯ ಸೌರವ್ ಗಂಗೂಲಿ ಮಾಜಿ ಕೋಚ್ ಅನಿಲ್ ಕುಂಬ್ಳೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟರೇ?
ಅವರ ಹೇಳಿಕೆಯನ್ನು ಗಮನಿಸಿದರೆ ಹೌದು ಎನಿಸುತ್ತದೆ. ‘ಅಂತಿಮವಾಗಿ ನಾಯಕನೇ ಬಾಸ್. ಕೋಚ್ ಎಲ್ಲರನ್ನೂ ಸಮತೋಲನದಿಂದ ಕೊಂಡೊಯ್ಯುವವ’ ಎಂದು ಗಂಗೂಲಿ ಕುಂಬ್ಳೆ ವಿಚಾರವನ್ನು ಪರೋಕ್ಷವಾಗಿ ಕೆಣಕಿದ್ದಾರೆ.
ಕುಂಬ್ಳೆ ತಂಡದ ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸುತ್ತಾರೆ ಎಂದು ಕೊಹ್ಲಿಗೆ ಅಸಮಾಧಾನವಿತ್ತು ಎಂದು ಊಹಾಪೋಹಗಳಿದ್ದವು. ಈ ಹೇಳಿಕೆಯ ಮೂಲಕ ಗಂಗೂಲಿ ಪರೋಕ್ಷವಾಗಿ ಅದನ್ನು ಒಪ್ಪಿಕೊಂಡಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತಿವೆ. ಇದೇ ವೇಳೆ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯವಿರುವವರನ್ನೇ ಮುಂದಿನ ಕೋಚ್ ಆಗಿ ಆಯ್ಕೆ ಮಾಡಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ