Publish Date: Sun, 02 Jul 2017 (10:36 IST)
Updated Date: Sun, 02 Jul 2017 (10:38 IST)
ಆಂಡಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಡಿಆರ್ ಎಸ್ ವಿಚಾರದಲ್ಲಿ ತಾನೆಷ್ಟು ಪರ್ಫೆಕ್ಟ್ ಎನ್ನುವುದನ್ನು ಧೋನಿ ಸಾಬೀತುಪಡಿಸಿದ್ದಾರೆ.
36 ನೇ ಓವರ್ ನಲ್ಲಿ ರವಿಚಂದ್ರನ್ ಅಶ್ವಿನ್ ಬಾಲ್ ವಿಂಡೀಸ್ ನ ಬ್ಯಾಟ್ಸ್ ಮನ್ ಪ್ಯಾಡ್ ಗೆ ತಗುಲಿದಾಗ ಭಾರತೀಯ ಆಟಗಾರರು ಔಟ್ ಗೆ ಮನವಿ ಸಲ್ಲಿಸಿದರು. ಆದರೆ ಅಂಪಾಯರ್ ಔಟ್ ನೀಡಲಿಲ್ಲ. ನಾಯಕ ವಿರಾಟ್ ಕೊಹ್ಲಿ ಡಿಆರ್ ಎಸ್ ಮೊರೆ ಹೋಗುವುದರಲ್ಲಿದ್ದರು.
ಅಷ್ಟರಲ್ಲಿ ಧೋನಿ ‘ಲೆಗ್ ಸ್ಟಂಪ್ ಕಡೆ ಬಾಲ್ ಹೋಗುತ್ತಿತ್ತು. ಸುಮ್ಮನೇ ಒಂದು ರಿವ್ಯೂ ನಷ್ಟವಾಗಬಹುದು’ ಎಂದು ಕೊಹ್ಲಿಯನ್ನು ತಡೆದರು. ಧೋನಿ ಊಹೆ ಕರೆಕ್ಟಾಗಿತ್ತು. ಬಾಲ್ ಲೆಗ್ ಸ್ಟಂಪ್ ನಾಚೆ ಹೋಗುತ್ತಿತ್ತು. ರಿವ್ಯೂ ತೆಗೆದುಕೊಂಡಿದ್ದರೆ ವೃಥಾ ಹಾಳಾಗುತ್ತಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ