Publish Date: Sun, 02 Jul 2017 (08:26 IST)
Updated Date: Sun, 02 Jul 2017 (08:35 IST)
ಮುಂಬೈ: ಟೀಂ ಇಂಡಿಯಾದ ನೂತನ ಕೋಚ್ ಯಾರು ಎಂಬ ಪ್ರಶ್ನೆಗೆ ಜೂನ್ 10 ರಂದು ಉತ್ತರ ಸಿಗಲಿದೆ. ಹಾಗಂತ ಸ್ವತಃ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಜೂನ್ 9 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದಾದ ಬಳಿಕ ಜೂನ್ 10 ರಂದು ಮುಂಬೈಯಲ್ಲಿ ಸಂದರ್ಶನ ನಡೆಯುವುದು. ನಂತರ ನೂತನ ಕೋಚ್ ಯಾರೆಂದು ಘೋಷಿಸಲಾಗುವುದು.
ಸದ್ಯಕ್ಕೆ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ದೊಡ್ಡ ಗಣೇಶ್ ಅರ್ಜಿ ಹಾಕಿರುವುದು ದೃಢಪಟ್ಟಿದೆ. ಇವರಲ್ಲದೆ, ರವಿ ಶಾಸ್ತ್ರಿ ಕೂಡಾ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ಆದರೂ ಅದಿನ್ನೂ ಖಚಿತವಾಗಿಲ್ಲ. ಹಾಗಿದ್ದರೂ, ನಾಯಕ ವಿರಾಟ್ ಕೊಹ್ಲಿಗೆ ರವಿ ಶಾಸ್ತ್ರಿಗೆ ಹೆಚ್ಚಿನ ಒಲವಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ