ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ ಚಾಂಪಿಯನ್ ಟ್ರೋಪಿ ಸೆಮಿಫಿನಾಲೆಯಲ್ಲಿ ಬೌಲರ್ ಮೊಹಮ್ಮದ್ ಶಮಿ ಅವರು ರೋಜಾ ಆಚರಣೆ ಮಾಡದೆ ನೀರು ಕುಡಿದಿರುವುದು ಚರ್ಚೆಗೆ ಕಾರಣವಾಗಿದೆ.
ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಸೋದರ ಸಂಬಂಧಿ ಮುಮ್ತಾಜ್ ಅವರು ತಮ್ಮ ಸಹೋದರನ ಬೆಂಬಲಕ್ಕೆ ನಿಂತು, ಆತ ದೇಶಕ್ಕಾಗಿ ಆಟವಾಡುತ್ತಿದ್ದಾನೆ. ರೋಜಾ ಆಚರಣೆ ಮಾಡದಕ್ಕೆ ಆತನನ್ನು ದೋಷಿಸುವವ ವ್ಯಕ್ತಿಗಳು "ನಾಚಿಕೆಗೇಡಿನವರು" ಎಂದು ಆಕ್ರೋಶ ಹೊರಹಾಕಿದ್ದಾರೆ.
ರಂಜಾನ್ ಸಮಯದಲ್ಲಿ, ಮಂಗಳವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಹಣಾಹಣಿಯಲ್ಲಿ ಮೊಹಮ್ಮದ್ ಶಮಿ ಅವರು ಎನರ್ಜಿ ಡ್ರಿಂಕ್ ಕುಡಿದಿದ್ದಾರೆ.
ರಂಜಾನ್ ಸಮಯದಲ್ಲಿ ರೋಜಾ ಆಚರಿಸದ ಭಾರತೀಯ ಕ್ರಿಕೆಟರ್ ಮೊಹಮ್ಮದ್ ಶಮಿಯನ್ನು ಅಪರಾಧಿ ಎಂದು ಕರೆಯುವ ಮೂಲಕ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ವಿವಾದವನ್ನು ಹುಟ್ಟುಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಮ್ತಾಜ್, "ಅವರು ದೇಶಕ್ಕಾಗಿ ಆಡುತ್ತಿದ್ದಾರೆ. ಪಾಕಿಸ್ತಾನಿ ಆಟಗಾರರು 'ರೋಜಾ' ಇಟ್ಟುಕೊಂಡು ಪಂದ್ಯಗಳನ್ನು ಆಡುತ್ತಿದ್ದಾರೆ, ಆದ್ದರಿಂದ ಇದು ಹೊಸದೇನಲ್ಲ. ಅವರ ಬಗ್ಗೆ ಇಂತಹ ಮಾತುಗಳು ಬರುತ್ತಿರುವುದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಈ ವಿಷಯಗಳ ಬಗ್ಗೆ ಗಮನ ಹರಿಸಬೇಡಿ ಮತ್ತು ಮಾರ್ಚ್ 9 ರಂದು ನಡೆಯಲಿರುವ ಪಂದ್ಯಕ್ಕೆ ತಯಾರಿ ನಡೆಸಿ ಎಂದು ನಾವು ಮೊಹಮ್ಮದ್ ಶಮಿಗೆ ಹೇಳಿದ್ದೇವೆ ಎಂದು ಮುಮ್ತಾಜ್ ಹೇಳಿದರು.
10 ಓವರ್‌ಗಳಲ್ಲಿ 3/48 ಅಂಕಗಳೊಂದಿಗೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಮಿ ಇದೀಗ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಮೆಗಾ ಈವೆಂಟ್‌ನಲ್ಲಿ ಇದುವರೆಗೆ, ವೇಗಿ ನಾಲ್ಕು ಪಂದ್ಯಗಳಲ್ಲಿ 19.88 ಸರಾಸರಿಯಲ್ಲಿ ಎಂಟು