ಚೆನ್ನೈ: ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಒಂದೇ ವರ್ಷದಲ್ಲಿ 2000 ಕ್ಕೂ ಅಧಿಕ ರನ್ ಮಾಡಿದ್ದಾರೆ. ಮೂರು ದ್ವಿಶತಕ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಜೀವನ ಶ್ರೇಷ್ಠ 2 ನೇ ಶ್ರೇಯಾಂಕ ಪಡೆದಿದ್ದಾರೆ. ಇದೀಗ ಕೊಹ್ಲಿ ಹೆಸರು ಬದಲಾಯಿಸಿಕೊಳ್ಳಬೇಕಂತೆ.
ಪೇಪರ್ ನಲ್ಲಿ ಜಾಹೀರಾತು ನೀಡಿ ತಮ್ಮ ಹೆಸರು ಬದಲಾಯಿಸಿಕೊಳ್ಳಲಿ ಎಂದು ಅವರಿಗೆ ಪುಕ್ಕಟೆ ಸಲಹೆ ಕೊಟ್ಟವರು ದೆಹಲಿಯ ಡ್ಯಾಶರ್ ವೀರೇಂದ್ರ ಸೆಹ್ವಾಗ್. ಹೊಸ ಹೆಸರನ್ನೂ ಅವರೇ ಸೂಚಿಸಿದ್ದಾರೆ.
“ಕೊಹ್ಲಿ ಪೇಪರ್ ನಲ್ಲಿ ಹೆಸರು ಬದಲಾವಣೆ ಕಾಲಂಗೆ ಜಾಹೀರಾತು ನೀಡಬೇಕು. ತನ್ನ ಹೆಸರು ಬಾದಲ್ ಎಂದರೆ ಮೋಡ ಎಂದು ಬದಲಿಸಿಕೊಳ್ಳಬೇಕು. ಮೋಡದ ಹಾಗೆ ಪ್ರತೀ ಬಾರಿ ಆಕಾಶ ತುಂಬಾ ಅವರೇ ತುಂಬಿಕೊಂಡಿರುತ್ತಾರೆ” ಎಂದು ವೀರೂ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ