Publish Date: Tue, 05 Nov 2019 (09:14 IST)
Updated Date: Tue, 05 Nov 2019 (09:16 IST)
ಮುಂಬೈ: ದೇವಧರ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಇಂಡಿಯಾ ಸಿ ತಂಡದ ನಾಯಕ ಶಬ್ನಂ ಗಿಲ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ.
ರಾಂಚಿಯಲ್ಲಿ ನಡೆಯತ್ತಿರುವ ಫೈನಲ್ ಪಂದ್ಯದಲ್ಲಿ ಶಬ್ನಂ ಟೀಂ ಇಂಡಿಯಾ ನಾಯಕ ಕೊಹ್ಲಿ 10 ವರ್ಷಗಳ ಹಿಂದೆ ಮಾಡಿದ್ದ ದಾಖಲೆ ಮುರಿದಿದ್ದಾರೆ. ಈ ಟ್ರೋಫಿಯಲ್ಲಿ ತಂಡವೊಂದನ್ನು ಮುನ್ನಡೆಸಿದ ಅತೀ ಕಿರಿಯ ವಯಸ್ಸಿನ ನಾಯಕ ಎಂಬ ದಾಖಲೆ ಕೊಹ್ಲಿ ಹೆಸರಲ್ಲಿತ್ತು.
ಅದೀಗ ಶಬ್ನಂ ಪಾಲಾಗಿದೆ. ಕೊಹ್ಲಿ 21 ವರ್ಷ 142 ದಿನಗಳಾಗಿದ್ದಾಗ ದೇವಧರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಉತ್ತರ ವಲಯವನ್ನು ನಾಯಕರಾಗಿ ಮುನ್ನಡೆಸಿದ್ದರು. ಇದೀಗ 20 ವರ್ಷ ವಯಸ್ಸಿನ ಶಬ್ನಂ ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.