Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯ 10 ವರ್ಷಗಳ ಹಿಂದಿನ ದಾಖಲೆ ಮುರಿದ ಶಬ್ನಂ ಗಿಲ್

webdunia
ಮಂಗಳವಾರ, 5 ನವೆಂಬರ್ 2019 (09:14 IST)
ಮುಂಬೈ: ದೇವಧರ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಇಂಡಿಯಾ ಸಿ ತಂಡದ ನಾಯಕ ಶಬ್ನಂ ಗಿಲ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ.


ರಾಂಚಿಯಲ್ಲಿ ನಡೆಯತ್ತಿರುವ ಫೈನಲ್ ಪಂದ್ಯದಲ್ಲಿ ಶಬ್ನಂ ಟೀಂ ಇಂಡಿಯಾ ನಾಯಕ ಕೊಹ್ಲಿ 10 ವರ್ಷಗಳ ಹಿಂದೆ ಮಾಡಿದ್ದ ದಾಖಲೆ ಮುರಿದಿದ್ದಾರೆ. ಈ ಟ್ರೋಫಿಯಲ್ಲಿ ತಂಡವೊಂದನ್ನು ಮುನ್ನಡೆಸಿದ ಅತೀ ಕಿರಿಯ ವಯಸ್ಸಿನ ನಾಯಕ ಎಂಬ ದಾಖಲೆ ಕೊಹ್ಲಿ ಹೆಸರಲ್ಲಿತ್ತು.

ಅದೀಗ ಶಬ್ನಂ ಪಾಲಾಗಿದೆ. ಕೊಹ್ಲಿ 21 ವರ್ಷ 142 ದಿನಗಳಾಗಿದ್ದಾಗ ದೇವಧರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಉತ್ತರ ವಲಯವನ್ನು ನಾಯಕರಾಗಿ ಮುನ್ನಡೆಸಿದ್ದರು. ಇದೀಗ 20 ವರ್ಷ ವಯಸ್ಸಿನ ಶಬ್ನಂ ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಧೋನಿಯಂತಾಗಲು ಇನ್ನೂ ಮಾಗಬೇಕು ರಿಷಬ್ ಪಂತ್