ಸಚಿನ್ ತೆಂಡುಲ್ಕರ್ ಕಾಲೆಳೆದ ಟ್ವಿಟರಿಗರು

Webdunia
ಮಂಗಳವಾರ, 31 ಅಕ್ಟೋಬರ್ 2017 (08:52 IST)
ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ರನ್ನೂ ಟ್ವಿಟರ್ ವಿಡಂಬನಕಾರರು ಕಾಲೆಳೆಯುವುದನ್ನು ಬಿಟ್ಟಿಲ್ಲ ಎನ್ನುವುದಕ್ಕೆ ಲೇಟೆಸ್ಟ್ ಉದಾಹರಣೆ ಈ ಘಟನೆ.

 
ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾಗೆ ಸಚಿನ್ ತೆಂಡುಲ್ಕರ್ ಅಭಿನಂದಿಸುವಾಗ ಕೊಂಚ ತಡವಾಗಿದ್ದೇ ಟ್ವಿಟರಿಗರ ತಮಾಷೆಗೆ ಕಾರಣರಾದರು. ‘ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಈ ಪಂದ್ಯದಲ್ಲಿ ಕಠಿಣ ಪೈಪೋಟಿ ನಿರೀಕ್ಷಿಸಬಹುದು’ ಎಂದು ಸಚಿನ್ ಟ್ವೀಟ್ ಮಾಡಿದ್ದರು.

ಇಷ್ಟು ಮಾಡಿದರೆ ತಮಾಷೆ ಮಾಡುವುದೇಕೆ ಎಂದು ನೀವು ಕೇಳಬಹುದು. ಆದರೆ ಸಚಿನ್ ಇಂತಹದ್ದೊಂದು ಸಂದೇಶ ಹಾಕಿರುವುದು ಪಂದ್ಯ ಮುಗಿದ ಮರುದಿನ. ಅಂದರೆ ಸೋಮವಾರ! ಅಷ್ಟೇ ಸಾಕಾಯಿತು ನೋಡಿ.

ಸಚಿನ್ ತೆಂಡುಲ್ಕರ್ ರನ್ನು ಅಭಿಮಾನಿಗಳು ಹಿಗ್ಗಾ ಮುಗ್ಗಾ ತಮಾಷೆ ಮಾಡಿದ್ದಾರೆ. ಮುಂದಿನ ವರ್ಷದ ಪಂದ್ಯದ  ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ಕೆಲವರು ಕೇಳಿದರೆ, ಮೊದಲು ನಿಮ್ಮ ಸೆಟ್ ಆಫ್ ಬ್ಯಾಕ್ಸ್ ಚೇಂಜ್ ಮಾಡಿ ಎಂದು ಪುಕ್ಸಟೆ ಸಲಹೆ ನೀಡಿದ್ದಾರೆ. ನೀವೇನಾದ್ರೂ ರಿಪೀಟ್ ಟೆಲಿಕಾಸ್ಟ್ ನೋಡಿ ಈ ಸಂದೇಶ ಹಾಕುತ್ತಿದ್ದೀರಾ ಎಂದು ತಮಾಷೆ ಮಾಡಿದ್ದಾರೆ. ಅಂತೂ ಕ್ರಿಕೆಟ್ ದೇವರು ಏನೋ ಹೇಳಲು ಹೋಗಿ ನಗೆಪಾಟಲಿಗೀಡಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಒಲಿಂಪಿಕ್ಸ್ ಅವಕಾಶ ಕಳೆದುಕೊಂಡ ಪಾಕಿಸ್ತಾನ: ಯಾವೆಲ್ಲಾ ತಂಡಗಳು ಆಯ್ಕೆ

ಸಾಕಪ್ಪಾ ಸಾಕು.. ಮೀಡಿಯಾ ಕಂಡು ಗೆಳೆಯನ ಜೊತೆ ಎಸ್ಕೇಪ್ ಆದ ಸ್ಮೃತಿ ಮಂಧಾನ

IND vs AUS: ಸರಣಿ ಗೆಲ್ಲಲು ಟೀಂ ಇಂಡಿಯಾಗೆ ಇಂದು ಅದ್ಭುತ ಅವಕಾಶ

ಮೊಹಮ್ಮದ್ ಶಮಿಗೆ ಸುಪ್ರೀಂ ನೋಟಿಸ್: ವೃತ್ತಿ ಜೀವನದ ಬಳಿಕ ವೈಯಕ್ತಿಕ ಜೀವನದಲ್ಲೂ ಸಂಕಷ್ಟ

ಏನಾದ್ರೂ ಆಗಲಿ ಅಹಮ್ಮದಾಬಾದ್ ನಲ್ಲಿ ಮಾತ್ರ ಟಿ20 ವಿಶ್ವಕಪ್ ಫೈನಲ್ ಬೇಡ ಅಂತಿದ್ದಾರೆ ಫ್ಯಾನ್ಸ್

ಮುಂದಿನ ಸುದ್ದಿ
Show comments