ಮುಂಬೈ: ಸ್ವ ಹಿತಾಸಕ್ತಿ ಹುದ್ದೆಯಲ್ಲಿರುವ ಆರೋಪ ಎದುರಿಸುತ್ತಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬಿಸಿಸಿಐನ ಸ್ವತಂತ್ರ ತನಿಖಾಧಿಕಾರಿಗೆ ವಿವರಣೆ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ನಲ್ಲಿ ಲಾಭ ದಾಯಕ ಹುದ್ದೆಯಲ್ಲಿದ್ದು, ಬಿಸಿಸಿಐನಲ್ಲೂ ಪ್ರತಿಷ್ಠಿತ ಹುದ್ದೆಯಲ್ಲಿರುವ ಕಾರಣಕ್ಕೆ ಸಚಿನ್ ಸ್ವಹಿತಾಸಕ್ತಿ ಹುದ್ದೆ ಸಂಘರ್ಷದಲ್ಲಿ ಸಿಲುಕಿದ್ದಾರೆ. ಇದು ಬಿಸಿಸಿಐ ನಿಯಮಗಳಿಗೆ ವಿರುದ್ಧವಾಗಿರುವ ಕಾರಣಕ್ಕೆ ಸಚಿನ್ ಗೆ ನೋಟಿಸ್ ನೀಡಲಾಗಿತ್ತು.
ಈ ನೋಟಿಸ್ ಗೆ ಉತ್ತರ ನೀಡಿರುವ ಸಚಿನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಲಹೆಗಾರನಾಗಿರುವುದಕ್ಕೆ ಯಾವುದೇ ಸಂಭಾವನೆ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಕೆಲಸ ಮುಂಬೈ ತಂಡಕ್ಕೆ ಸಲಹೆ ನೀಡುವುದಷ್ಟೇ ಎಂದು ಸಚಿನ್ ಸುದೀರ್ಘವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ