Publish Date: Sat, 27 May 2017 (09:51 IST)
Updated Date: Sat, 27 May 2017 (09:54 IST)
ಮುಂಬೈ: ತಮ್ಮ ಅಪ್ಪಟ ಅಭಿಮಾನಿ ಸುಧೀರ್ ಕುಮಾರ್ ಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಲಂಡನ್ ಗೆ ತೆರಳುವ ವೀಸಾ ಪಡೆಯಲು ಸಚಿನ್ ತೆಂಡುಲ್ಕರ್ ನೆರವಾಗಿದ್ದಾರೆ.
ಭಾರತ ತಂಡ ಎಲ್ಲೇ ಪ್ರವಾಸ ಕೈಗೊಂಡರೂ ಜತೆಯಲ್ಲೇ ಸಾಗುವ ಸುಧೀರ್ ಗೆ ಲಂಡನ್ ಗೆ ತೆರಳಲು ಫಾಸ್ಟ್ ಟ್ರ್ಯಾಕ್ ವೀಸಾ ಸಿಕ್ಕಿರಲಿಲ್ಲ. ಅಭಿಮಾನಿಯ ಕಷ್ಟ ಕಂಡು ಕರಗಿದ ಸಚಿನ್ ವಲಸೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಇವರು ಟೀಂ ಇಂಡಿಯಾದ ಅನಧಿಕೃತ ಲಾಂಛನವಾಗಿದ್ದಾರೆ. ಭಾರತ ತಂಡ ಎಲ್ಲೇ ತೆರಳಿದರೂ ಸ್ವಂತ ಖರ್ಚಿನಿಂದ ತೆರಳುತ್ತಾರೆ. ಕ್ರಿಕೆಟಿಗರಿಂದ ಹಣ ಸಹಾಯ ಪಡೆಯುವುದಿಲ್ಲ. ಅವರಿಗೆ ನಿಮ್ಮ ಸಹಕಾರ ಇರಬೇಕೆಂದು ಕೋರುತ್ತೇನೆ ಎಂದು ಸಚಿನ್ ಪತ್ರದಲ್ಲಿ ತಿಳಿಸಿದ್ದರು.
ಸಚಿನ್ ಪತ್ರಕ್ಕೆ ಸ್ಪಂದಿಸಿದ ಅಧಿಕಾರಿಗಳು, ಸುಧೀರ್ ಗೆ 26 ಸಾವಿರ ರೂ. ಮೌಲ್ಯದ ಫಾಸ್ಟ್ ಟ್ರ್ಯಾಕ್ ವೀಸಾ ನೀಡಿದ್ದಾರೆ. ಈ ಬಾರಿ ಸುಧೀರ್ ಪ್ರವಾಸಕ್ಕೆ ಎಫ್ ಎಂ ರೇಡಿಯೋ ವಾಹಿನಿಯೊಂದು ವೆಚ್ಚ ಭರಿಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ