Publish Date: Wed, 08 Nov 2017 (08:23 IST)
Updated Date: Wed, 08 Nov 2017 (08:25 IST)
ಮುಂಬೈ: ಸಚಿನ್ ತೆಂಡುಲ್ಕರ್ ಎಂದರೆ ಕ್ರಿಕೆಟ್ ದೇವರು ಎಂದೇ ಅಭಿಮಾನಿಗಳು ಆರಾಧಿಸುತ್ತಾರೆ. ಆದರೆ ಆ ದೇವರೂ ಅಭಿಮಾನಿಗಳ ಮೇಲೆ ಕೋಪಗೊಂಡ ಘಟನೆ ನಡೆದಿದೆ.
ಇದು ನಡೆದಿರುವುದು ಜೋಧ್ ಪುರ ವಿಮಾನ ನಿಲ್ದಾಣದಲ್ಲಿ. ಜಾಹೀರಾತೊಂದರ ಶೂಟಿಂಗ್ ಗೆ ಸಚಿನ್ ಇಲ್ಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಿರಿ ಕಿರಿ ಮಾಡಿದ ಅಭಿಮಾನಿಗಳ ಮೇಲೆ ಮಾಸ್ಟರ್ ಬ್ಲಾಸ್ಟರ್ ಸಿಟ್ಟಾಗಿದ್ದಾರೆ.
ಸಚಿನ್ ಬರುವ ಸುದ್ದಿ ಕೇಳಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಶೂಟಿಂಗ್ ಗೆ ಹೋಗುವ ಅವಸರದಲ್ಲಿದ್ದ ಸಚಿನ್ ಅಭಿಮಾನಿಗಳ ಸೆಲ್ಫೀಗೆ ಪೋಸ್ ಕೊಡುವ ಮೂಡ್ ನಲ್ಲಿರಲಿಲ್ಲ. ದಾರಿ ಬಿಡಲು ಅವರ ಭದ್ರತಾ ಸಿಬ್ಬಂದಿ ಕೋರಿದರೂ ಕರಗದ ಅಭಿಮಾನಿಗಳ ಮೇಲೆ ಸಚಿನ್ ಗೆ ಎಲ್ಲಿಲ್ಲದ ಸಿಟ್ಟು ಬಂತು. ದೂರ ಸರಿಯಿರಿ ಎಂದು ಜೋರಾಗಿಯೇ ಕೂಗಿದ ಸಚಿನ್ ತಳ್ಳಾಟದ ನಡುವೆಯೇ ಸಾಗಬೇಕಾಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೂ ಮಾತನಾಡಲು ಸಚಿನ್ ನಿರಾಕರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ