Select Your Language

Notifications

webdunia
webdunia
webdunia
webdunia

ಅಭಿಮಾನಿಗೆ ಸಚಿನ್ ತೆಂಡುಲ್ಕರ್ ಕೊಟ್ಟ ಉತ್ತರ ಈಗ ವೈರಲ್!

ಅಭಿಮಾನಿಗೆ ಸಚಿನ್ ತೆಂಡುಲ್ಕರ್ ಕೊಟ್ಟ ಉತ್ತರ ಈಗ ವೈರಲ್!
Mumbai , ಮಂಗಳವಾರ, 18 ಏಪ್ರಿಲ್ 2017 (05:30 IST)
ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಹಾಗೆಲ್ಲಾ ಅಭಿಮಾನಿಗೆ ಒಲಿಯುವವರಲ್ಲ. ಆದರೆ ಇಲ್ಲೊಬ್ಬ ಸಾಮಾನ್ಯ ಅಭಿಮಾನಿಯ ಭಕ್ತಿಗೆ ಮೆಚ್ಚಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದೀಗ ಭಾರೀ ವೈರಲ್ ಆಗಿದೆ.

 
ಸಚಿನ್ ಇನ್ ಸ್ಟಾಗ್ರಾಂ ಪುಟದಲ್ಲಿ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಕರಣ್ ಗಾಂಧಿ ಎಂಬವರು ಕೈ ಬರಹದ ಪತ್ರ ಬರೆದು ಪೋಸ್ಟ್ ಮಾಡಿದ್ದರು. ಇದಕ್ಕೆ ಸ್ವತಃ ಸಚಿನ್ ಮೆಚ್ಚಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪ್ರಕಟಿಸಿರುವುದಲ್ಲದೆ ಉತ್ತರವನ್ನೂ ಕೊಟ್ಟಿದ್ದಾರೆ.

ಅಷ್ಟಕ್ಕೂ ಆ ಪತ್ರದಲ್ಲಿ ಕರಣ್, ತಾವು ಹೇಗೆ ಸಚಿನ್ ಆಡುವುದನ್ನು ನೋಡಲು ಟ್ಯೂಷನ್ ಕ್ಲಾಸ್ ತಪ್ಪಿಸಿಕೊಳ್ಳುತ್ತಿದೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿನ್ ಹಾಗಿದ್ದರೆ ನಿಮ್ಮ ಟ್ಯೂಷನ್ ಟೀಚರ್ ಗೆ ಏಕದಿನ ಪಂದ್ಯವಿದ್ದಾಗಲೆಲ್ಲಾ ಮಂಡೆ ಬಿಸಿಯಾಗುತ್ತಿತ್ತೇನೋ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪುಣೆ ತಂಡಕ್ಕೆ ಧೋನಿ ನಿಷ್ಠರಾಗಿಲ್ಲವೇ? ಇಲ್ಲಿದೆ ಉತ್ತರ