Select Your Language

Notifications

webdunia
webdunia
webdunia
webdunia

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಎಸ್.ಬದರೀನಾಥ್

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಎಸ್.ಬದರೀನಾಥ್
Hyderabad , ಮಂಗಳವಾರ, 22 ನವೆಂಬರ್ 2016 (13:10 IST)
ಹೈದರಾಬಾದ್: ಹೈದಾರಾಬಾದ್ ಬ್ಯಾಟ್ಸ್ ಮನ್ ಸುಬ್ರಮಣಿಯನ್ ಬದರೀನಾಥ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಛತ್ತೀಸ್ ಘಡ ತಂಡದ ವಿರುದ್ಧ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಶತಕ ದಾಖಲಿಸಿದ ಅವರು ಈ ದಾಖಲೆ ಮಾಡಿದರು. ಇದರೊಂದಿಗೆ ಬದರೀನಾಥ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಒಟ್ಟು 10,045 ರನ್ ಒಟ್ಟುಗೂಡಿಸಿದಂತಾಗಿದೆ.

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದವರ ಪೈಕಿ ಸುನಿಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 25,834 ರನ್ ಗಳಿಸಿದ್ದಾರೆ. ಬದರೀನಾಥ್ ತಮಿಳು ನಾಡು ತಂಡದ ಪರವಾಗಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ್ದರು. ಪ್ರಸಕ್ತ ಹೈದಾರಾಬಾದ್ ಪರ ಆಡುತ್ತಿದ್ದಾರೆ. ಟೀಂ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ ಅನುಭವವೂ 36 ವರ್ಷದ ಬದರೀನಾಥ್ ಅವರಿಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಧಾನಗತಿಯ ಓವರ್ ಎಸೆದ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಗೆ ಅಮಾನತು ಶಿಕ್ಷೆ