ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರುದ್ಧ 6 ವಿಕೆಟ್ ಸೋಲಿನ ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಎದುರಾಳಿ ತಂಡವು ತಮ್ಮನ್ನು 138 ರನ್ ಸಾಧಾರಣ ಮೊತ್ತಕ್ಕೆ ನಿರ್ಬಂಧಿಸಿದ ಆಟದ ಯೋಜನೆಯನ್ನು ಶ್ಲಾಘಿಸಿದರು ಮತ್ತು ವಿಶೇಷವಾಗಿ ಸ್ಪಿನ್ನರುಗಳು ತುಂಬಾ ಒತ್ತಡವನ್ನು ಹಾಕಿದರು ಮತ್ತು ಅವರ ಬೌಲಿಂಗ್ ಬದಲಾವಣೆ ಕೂಡ ಉತ್ತಮವಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ಆದರೆ ನಾವು ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದರಿಂದ ಜತೆಯಾಟವನ್ನು ನಿರ್ಮಿಸುವುದು ಕಷ್ಟವಾಯಿತು ಎಂದು 23 ವರ್ಷದ ದಕ್ಷಿಣ ಆಫ್ರಿಕಾ ಕ್ರಿಕೆಟರ್ ಕಳೆದ ರಾತ್ರಿ ಪಂದ್ಯ ನಂತರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸೋಲಿಗೆ ಕಾರಣವನ್ನು ವಿಶ್ಲೇಷಿಸಿದರು. ಡಿ ಕಾಕ್ ಆರ್‌ಸಿಬಿ ವಿರುದ್ಧ 52 ಎಸೆತಗಳಿಗೆ 60 ರನ್ ಸ್ಕೋರ್ ಮಾಡಿದರೂ 6 ವಿಕೆಟ್‌ಗಳಿಂದ ಪಂದ್ಯವನ್ನು ಸೋತರು.
ನಾವು ಇನ್ನೂ 20 ರನ್ ಹೆಚ್ಚು ಗಳಿಸಿದ್ದರೆ, ನಾವು 160 ರನ್ ಗಳಿಸುತ್ತಿದ್ದೆವು. ಆದರೆ ಡೆತ್ ಓವರುಗಳಲ್ಲಿ ಅವರು ಚೆನ್ನಾಗಿ ಬೌಲ್ ಮಾಡಿದ್ದರಿಂದ ನಾವು ಸೋಲಪ್ಪಿದೆವು ಎಂದು ಅವರು ಪ್ರತಿಪಾದಿಸಿದರು. ಡಿ ಕಾಕ್ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಕೂಡ ಶ್ಲಾಘಿಸಿದರು. ಅವರು 45 ಎಸೆತಗಳಲ್ಲಿ 54 ಅಜೇಯ ರನ್ ಬಾರಿಸಿದರು.