Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ರವಿ ಶಾಸ್ತ್ರಿ ಗುತ್ತಿಗೆ ನವೀಕರಣ ಅಸಂಭವ

ravi shastri
ನವದೆಹಲಿ: , ಸೋಮವಾರ, 23 ಮೇ 2016 (14:29 IST)
ಹೆಡ್ ಕೋಚ್ ಮತ್ತು ಸಹಾಯಕ ಕೋಚ್‌ಗಳಿಗೆ ಜಾಹೀರಾತು ಪ್ರಕಟಿಸುವ ಬಿಸಿಸಿಐ ನಿರ್ಧಾರದಿಂದ ರಾಷ್ಟ್ರೀಯ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಜತೆ  ಬೆಂಬಲ ಸಿಬ್ಬಂದಿಯಾದ ಸಂಜಯ್ ಬಂಗಾರ್, ಆರ್. ಶ್ರೀಧರ್ ಮತ್ತು ಭರತ್ ಅರುಣ್ ಅವರಿಗೆ ಮರುಆಯ್ಕೆಯ ಅವಕಾಶ ಮುಚ್ಚಿಹೋಗಿದೆ.
 
 ಮಂಡಳಿಯುವ ಮುಖ್ಯ ಕೋಚ್ ಮತ್ತು ಸಹಾಯಕ ಕೋಚ್‌ಗಳ ಆಯ್ಕೆಗೆ ಜಾಹೀರಾತು ಪ್ರಕಟಿಸುತ್ತದೆ ಎಂದು ಬಿಸಿಸಿಐ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. 
 
ಶಾಸ್ತ್ರಿ ಅವರನ್ನು  ಟೀಂ ನಿರ್ದೇಶಕರಾಗಿ ಆಯ್ಕೆ ಮಾಡಿದಾಗಿನಿಂದ ಬಂಗಾರ್, ಅರುಣ್ ಮತ್ತು ಶ್ರೀಧರ್ ಅವರು ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೋಚ್‌ಗಳಾಗಿದ್ದಾರೆ. ವಿಶ್ವ ಟಿ 20ಯೊಂದಿಗೆ ಶಾಸ್ತ್ರಿಯವರ ಅಧಿಕಾರಾವಧಿ ಮುಗಿದಿದೆ. ಯಾರು ಹೆಡ್ ಕೋಚ್ ಆಗಿ ಆಯ್ಕೆಯಾದರೂ  ಬೆಂಬಲ ಸಿಬ್ಬಂದಿ ಆಯ್ಕೆ ಮಾಡುವ ಅವಕಾಶ ಅವರಿಗಿರುತ್ತದೆ. ಬಂಗಾರ್ ಅವರು ಕಿಂಗ್ಸ್ ಇಲೆವನ್ ಪಂಜಾಬ್ ಹೆಡ್ ಕೋಚ್ ಆಗಿ ಕಠಿಣ ಸನ್ನಿವೇಶ ಎದುರಿಸಿದ್ದಾರೆ. ಎರಡು ಸತತ ಸೀಸನ್‌ಗಳಲ್ಲಿ ತಂಡವು ಕೊನೆಯದಾಗಿ ಮುಕ್ತಾಯ ಕಂಡಿದೆ.
 
ಶ್ರೀಧರ್ ಕೂಡ 2014ರಿಂದ ಫ್ರಾಂಚೈಸಿಯಲ್ಲಿದ್ದಾರೆ. ಅರುಣ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬೌಲಿಂಗ್ ವಿಭಾಗದಲ್ಲಿದ್ದು, ಬೌಲಿಂಗ್ ದುರ್ಬಲವೆಂದು ಪರಿಗಣಿಸಲಾಗಿದೆ.
 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಕೆಆರ್‌ ತಂಡಕ್ಕೆ ಸನ್‌ರೈಸರ್ಸ್ ವಿರುದ್ಧ ಜಯ: ಪ್ಲೇ ಆಫ್ ಪ್ರವೇಶ