Select Your Language

Notifications

webdunia
webdunia
webdunia
webdunia

ಕೆಕೆಆರ್‌ ತಂಡಕ್ಕೆ ಸನ್‌ರೈಸರ್ಸ್ ವಿರುದ್ಧ ಜಯ: ಪ್ಲೇ ಆಫ್ ಪ್ರವೇಶ

ಕೆಕೆಆರ್‌ ತಂಡಕ್ಕೆ ಸನ್‌ರೈಸರ್ಸ್ ವಿರುದ್ಧ ಜಯ: ಪ್ಲೇ ಆಫ್ ಪ್ರವೇಶ
ಕೋಲ್ಕತಾ , ಸೋಮವಾರ, 23 ಮೇ 2016 (12:19 IST)
ಸುನಿಲ್ ನಾರಾಯಣ್ ಮತ್ತು ಕುಲದೀಪ್ ಯಾದವ್ ಅವರ ಅಮೋಘ ಬೌಲಿಂಗ್ ನೆರವಿನಿಂದ ಮತ್ತು  ಯುಸುಫ್ ಪಠಾಣ್ ಅವರ ಮನೋಜ್ಞ ಬ್ಯಾಟಿಂಗ್ ನೆರವಿನಿಂದ ಕೊಲ್ಕತಾ ನೈಟ್ ರೈಡರ್ಸ್ ತಂಡವು  ಸನ್ ರೈಸರ್ಸ್ ವಿರುದ್ಧ 22 ರನ್ ಜಯಗಳಿಸುವ ಮೂಲಕ ಪ್ಲೇಆಫ್ ಪ್ರವೇಶಿಸಿದೆ.

ಸುನಿಲ್ ನಾರಾಯಣ್(3ಕ್ಕೆ 26) ನಿಧಾನ ಮತ್ತು ತಿರುಗುವ ಎಡನ್ ಗಾರ್ಡನ್ಸ್ ಮೈದಾನದಲ್ಲಿ ಸೀಸನ್‌ನ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮಾಡಿದರು. ಅವರಿಗೆ ಎಡಗೈ ಬೌಲರ್ ಯಾದವ್ ಬೆಂಬಲವಾಗಿ ನಿಂತು 2 ವಿಕೆಟ್ ಕಬಳಿಸಿದ್ದರಿಂದ ಕೊಲ್ಕತಾದ 172 ರನ್‌ ಸ್ಕೋರಿಗೆ ಪ್ರತಿಯಾಗಿ ಕೊಲ್ಕತಾ 8 ವಿಕೆಟ್‌ಗೆ 149 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.
 
 ಕೆಕೆಆರ್ ಮತ್ತು ಸನ್ ರೈಸರ್ಸ್ ಎರಡೂ 14 ಪಂದ್ಯಗಳಿಂದ 16 ಪಾಯಿಂಟ್ ಗಳಿಸಿದ್ದು ಎರಡೂ ಟೀಂಗಳು ಪ್ಲೇ ಆಫ್ ಪ್ರವೇಶವನ್ನು ಪಡೆದವು. 
 
ನೈಟ್ ರೈಡರ್ಸ್ 172 ರನ್ ಬೆನ್ನಟ್ಟಿದ ಸನ್ ರೈಸರ್ಸ್ ಶಿಖರ್ ಧವನ್ 30 ಎಸೆತಗಳಲ್ಲಿ 51 ರನ್ ಸಿಡಿಸಿದರು. ಅವರ ಸ್ಕೋರಿನಲ್ಲಿ ನಾಲ್ಕು ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳಿದ್ದವು.
 
ಗೆಲುವಿಗೆ ಬೇಕಾದ ರನ್ ರೇಟ್ ಏರುತ್ತಲೇ ಹೋಗಿ ಧವನ್ ಅರ್ಧಶತಕ ಪೂರೈಸಿದ ಬಳಿಕ ಯಾದವ್ ಎಸೆತಕ್ಕೆ ಕಾಲಿನ್ ಮನ್ರೋಗೆ ಸುಲಭದ ಕ್ಯಾಚ್ ನೀಡಿ ಔಟಾದರು. ನಾಲ್ಕು ಎಸೆತಗಳ ನಂತರ ನಮನ್ ಓಜಾ ಕೂಡ ನಾರಾಯಣ್ ಎಸೆತಕ್ಕೆ ಔಟಾದರು. ಯುವರಾಜ್ ಸಿಂಗ್ ಯಾದವ್ ಎಸೆತದಲ್ಲಿ ಎರಡು ಸಿಕ್ಸರ್ ಬಾರಿಸಿದರು. ಎಡಗೈ ಸ್ಪಿನ್ನರ್ ಶಕೀಬ್ ಅಲ್ ಹಸನ್ ಯುವರಾಜ್ ಅವರನ್ನು ಔಟ್ ಮಾಡಿದ ಬಳಿಕ ದೀಪಕ್ ಹೂಡಾ ರನ್‌ಔಟ್‌ಗೆ ಬಲಿಯಾದರು.

ಕೋಲ್ಕತಾ ಪರ ತಮ್ಮ ಅತ್ಯುತ್ತಮ ಫಾರಂ ಕಾಯ್ದುಕೊಂಡ ಯುಸುಫ್ ಪಠಾಣ್ 34 ಎಸೆತಗಳಲ್ಲಿ 52 ರನ್ ನೆರವಿನಿನೊಂದಿಗೆ ಅಜೇಯವಾಗಿ ಉಳಿದರು. ಅವರು ಮನಿಶ್ ಪಾಂಡೆ ಅವರ 48 ರನ್ ನೆರವಿನೊಂದಿಗೆ ಇವರಿಬ್ಬರ ಜೋಡಿ 87 ರನ್ ಕಲೆಹಾಕಿತು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮಿಂಚಿದ ಕೊಹ್ಲಿ ಅರ್ಧಶತಕ: ಪ್ಲೇ ಆಫ್ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್