Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ವಿರುದ್ಧ ಸೋತ ಹತಾಶೆಯಲ್ಲಿ ನಿವೃತ್ತಿ ಹೇಳುತ್ತಾರಂತೆ ರೋಹಿತ್ ಶರ್ಮಾ!

ಪಾಕಿಸ್ತಾನ ವಿರುದ್ಧ ಸೋತ ಹತಾಶೆಯಲ್ಲಿ ನಿವೃತ್ತಿ ಹೇಳುತ್ತಾರಂತೆ ರೋಹಿತ್ ಶರ್ಮಾ!
London , ಮಂಗಳವಾರ, 20 ಜೂನ್ 2017 (09:23 IST)
ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾದ ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಚಿಂತನೆ ನಡೆಸಿದ್ದಾರಂತೆ!

 
ಒಂದು ಸೋಲಿಗೆ ಹೀಗೆ ವೃತ್ತಿ ಜೀವನವನ್ನೇ ಕೊನೆಗಾಣಿಸುವುದಾ? ಅಂತ ನಿಮಗೆ ಅಚ್ಚರಿಯಾಗಬಹುದು. ಆದರೆ ರೋಹಿತ್ ಹೇಳದ್ದು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ತಮ್ಮ ವಿರುದ್ಧ ಬರುತ್ತಿರುವ ಟೀಕೆಗಳನ್ನು ನೋಡಿ ಈ ರೀತಿ ತಮಾಷೆ ಮಾಡಿದ್ದಾರೆ.

ಪ್ರಮುಖ ಪಂದ್ಯಗಳಲ್ಲಿ ವಿಫಲವಾಗುವ ಪರಂಪರೆ ನನ್ನದು. ಇಂತಹ ಸನ್ನಿವೇಶದಲ್ಲಿ ನಿವೃತ್ತಿಯಾಗುವ ಯೋಚನೆಯಿದೆ. ಪಾಕಿಸ್ತಾನದ ವಿರುದ್ಧ ಶೂನ್ಯಕ್ಕೆ ಔಟಾಗಿದ್ದೆ. ಇದಕ್ಕಿಂತ ಕಡಿಮೆ ರನ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಬಲಿಷ್ಠ ತಂಡಗಳ ವಿರುದ್ಧ ವಿಫಲವಾಗುವ ಪರಂಪರೆಗೆ ನಿವೃತ್ತಿ ಹೇಳುವ ಸಮಯವಿದು ಎಂದು ರೋಹಿತ್ ತಮಾಷೆ ಮಾಡಿದ್ದಾರೆ.

ಐಸಿಸಿ ಕೂಟಗಳನ್ನೂ ಐಪಿಎಲ್ ಎಂದು ಮರು ನಾಮಕರಣ ಮಾಡಿ. ಆಗ ಒತ್ತಡವಿಲ್ಲದೆ ಆಡುತ್ತೇನೆ. ಆಗ ನಾನು ನಿರ್ಧಾರ ಬದಲಾಯಿಸಬಹುದು ಎಂದು ಅವರು ಹಾಸ್ಯ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಹ ಆಟಗಾರನ ಬಗ್ಗೆ ವಿವಾದಿತ ಟ್ವೀಟ್ ಮಾಡಿ ಅಳಿಸಿದ ಹಾರ್ದಿಕ್ ಪಾಂಡ್ಯ