Publish Date: Tue, 20 Jun 2017 (09:04 IST)
Updated Date: Tue, 20 Jun 2017 (09:07 IST)
ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಏಕಾಂಗಿಯಾಗಿ ಭಾರತದ ಪರ ರನ್ ಸಿಡಿಸುತ್ತಿದ್ದ ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜಾ ಮಾಡಿದ ತಪ್ಪಿನಿಂದ ರನೌಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ.
ಇದರಿಂದ ಹಾರ್ದಿಕ್ ಪಾಂಡ್ಯ ಜಡೇಜಾ ಮೇಲೆ ಅಸಮಾಧಾನ ಸೂಚಿಸುತ್ತಲೇ ಹೊರ ನಡೆದಿದ್ದರು. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಿರಲಿಲ್ಲ. ತಮ್ಮ ಟ್ವಿಟರ್ ಪೇಜ್ ನಲ್ಲಿ ಈ ಬಗ್ಗೆ ಮೆಸೇಜ್ ಮಾಡಿದ್ದರು.
‘ನಮ್ಮನ್ನು ನಾವೇ ಕೊಳ್ಳೆ ಹೊಡೆದುಕೊಂಡೆವು. ಇತರರಿಗೆ ಆ ಸಾಮರ್ಥ್ಯವಿಲ್ಲ’ ಎಂದು ಪರೋಕ್ಷವಾಗಿ ಜಡೇಜಾಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದರು. ಆದರೆ ಈ ಸಂದೇಶ ವಿವಾದವಾಗುವ ಲಕ್ಷಣ ಕಾಣುತ್ತಿದ್ದಂತೆ ಅಳಿಸಿಹಾಕಿದರು.
ಈ ಪಂದ್ಯದಲ್ಲಿ ಉಳಿದ ಬ್ಯಾಟ್ಸ್ ಮನ್ ಗಳು ಒಬ್ಬರಾದ ಮೇಲೆ ಒಬ್ಬರಂತೆ ವಿಕೆಟ್ ಒಪ್ಪಿಸಿ ನಡೆಯುತ್ತಿದ್ದರೆ, ಪಾಂಡ್ಯ ಮಾತ್ರ ಏಕಾಂಗಿಯಾಗಿ ಹೋರಾಡಿ 46 ಎಸೆತಗಳಲ್ಲಿ ಸಿಡಿಲಬ್ಬರದ 76 ರನ್ ಗಳಿಸಿ ಮಿಂಚಿದ್ದರು. ಆದರೂ ಅವರಿಗೆ ಭಾರತದ ಹೀನಾಯ ಸೋಲು ತಪ್ಪಿಸಲಾಗಲಿಲ್ಲ ಎಂಬ ನೋವಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ