Select Your Language

Notifications

webdunia
webdunia
webdunia
webdunia

ಕೋಚ್ ಕುಂಬ್ಳೆ ಬದಲಾವಣೆಗೆ ಪಟ್ಟು ಹಿಡಿದು ಕೂತಿದ್ದಾರಾ ಕೊಹ್ಲಿ?!

ಕೋಚ್ ಕುಂಬ್ಳೆ ಬದಲಾವಣೆಗೆ ಪಟ್ಟು ಹಿಡಿದು ಕೂತಿದ್ದಾರಾ ಕೊಹ್ಲಿ?!
Mumbai , ಮಂಗಳವಾರ, 20 ಜೂನ್ 2017 (08:13 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೋಚ್ ಅನಿಲ್ ಕುಂಬ್ಳೆ ಬದಲಾವಣೆಗೆ ಪಟ್ಟು ಹಿಡಿದು ಕುಳಿತಿದ್ದಾರಾ? ಹಾಗೊಂದು ಸುದ್ದಿ ಹಬ್ಬಿದೆ.

 
ಇಬ್ಬರ ನಡುವೆಯೂ ಬಿಸಿಸಿಐ ಸಂಧಾನ ನಡೆಸಿ ಕೆಲ ದಿನಗಳ ಮಟ್ಟಿಗೆ ಅಡ್ಜಸ್ಟ್ ಮಾಡಿಕೊಳ್ಳುವಂತೆ ಕೊಹ್ಲಿಗೆ ಸಲಹೆ ಮಾಡಿತ್ತು. ಆದರೆ ಕೊಹ್ಲಿ ಕುಂಬ್ಳೆಯನ್ನೇ ಮತ್ತೆ ಮುಂದುವರಿಸಬಾರದು ಎಂದು ಕ್ರಿಕೆಟ್ ಸಲಹಾ ಸಮಿತಿ ಎದುರು ಪಟ್ಟು ಹಿಡಿದಿದ್ದಾರೆ.

ಲಂಡನ್ ನಲ್ಲಿ ಸಲಹಾ ಸಮಿತಿ ಸದಸ್ಯರಾದ ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್ ಕೊಹ್ಲಿ ಜತೆ ಫೈನಲ್ ಪಂದ್ಯಕ್ಕೂ ಮೊದಲು ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೊಹ್ಲಿ ಮತ್ತು ಕುಂಬ್ಳೆ ಸಂಬಂಧ ಸರಿಪಡಿಸಲಾಗದಷ್ಟು ಹಳಸಿದೆ ಎಂದು ತಿಳಿದು ಬಂದಿದೆ.

ಆದರೆ ಕುಂಬ್ಳೆ ಬದಲಿಗೆ, ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಸೆಹ್ವಾಗ್ ಅಥವಾ ಇನ್ಯಾರನ್ನೇ ಆಯ್ಕೆ ಮಾಡಿದರೂ ಕೊಹ್ಲಿಗೆ ಅವರ ಜತೆಗಿನ ಸಂಬಂಧ ಸರಿ ಹೋಗದಿದ್ದರೆ ಆಗೇನು ಮಾಡುವುದು ಎಂಬ ಪ್ರಶ್ನೆ ಬಿಸಿಸಿಐ ದಿಗ್ಗಜರನ್ನು ಕಾಡುತ್ತಿದೆ.

ಒಂದು ವೇಳೆ ಕುಂಬ್ಳೆಯನ್ನು ಕಿತ್ತು ಹಾಕಿದರೂ ಯಾವ ಕಾರಣ ನೀಡಿ ವಜಾ ಮಾಡುವುದು? ಕೋಚ್ ಆಗಿ ಅವರ ಗರಡಿಯಲ್ಲಿ ಭಾರತ ತಂಡ ಇದುವರೆಗೆ ಉತ್ತಮ ಸಾಧನೆಯನ್ನೇ ಮಾಡಿದೆ. ಹಾಗಿದ್ದರೂ ಕೊಹ್ಲಿ ಬಯಸುವ ರವಿ ಶಾಸ್ತ್ರಿಯನ್ನೇ ಮನ ಒಲಿಸಿ ಕೋಚ್ ಸ್ಥಾನಕ್ಕೆ ಕರೆ ತರುವುದೋ ಎಂಬ ಜಿಜ್ಞಾಸೆಯಲ್ಲಿ ಬಿಸಿಸಿಐ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಡಗಿನ ನಾವಿಕ ಪಾಕ್ ತಂಡ ಸೇರಿ ಭಾರತಕ್ಕೆ ಮುಳುವಾದ..!