Select Your Language

Notifications

webdunia
webdunia
webdunia
webdunia

ಗಾಯ ವಾಸಿ ಜತೆಗೆ ದೇಹ ತೂಕ ಕಳೆದುಕೊಳ್ಳಲು ವರ್ಕೌಟ್ ಮಾಡುತ್ತಿರುವ ರೋಹಿತ್ ಶರ್ಮಾ

ಗಾಯ ವಾಸಿ ಜತೆಗೆ ದೇಹ ತೂಕ ಕಳೆದುಕೊಳ್ಳಲು ವರ್ಕೌಟ್ ಮಾಡುತ್ತಿರುವ ರೋಹಿತ್ ಶರ್ಮಾ
ಮುಂಬೈ , ಸೋಮವಾರ, 7 ಡಿಸೆಂಬರ್ 2020 (10:10 IST)
ಮುಂಬೈ: ಇತ್ತೀಚೆಗೆ ಐಪಿಎಲ್ ನಲ್ಲಿ ರೋಹಿತ್ ಶರ್ಮಾರನ್ನು ನೋಡಿದ ಮೇಲೆ ಕೆಲವರು ಅವರ ದೇಹ ತೂಕದ ಬಗ್ಗೆ ತಮಾಷೆ ಮಾಡಿದ್ದಾರೆ. ಸ್ವಲ್ಪ ಹೆಚ್ಚೇ ಎನ್ನುವಷ್ಟು ದೇಹ ತೂಕ ಮಾಡಿಕೊಂಡಿದ್ದ ರೋಹಿತ್ ಈಗ ತೆಳ್ಳಗಾಗಲು ವರ್ಕೌಟ್ ಮಾಡುತ್ತಿದ್ದಾರೆ.


ಬೆಂಗಳೂರಿನ ಎನ್ ಸಿಎಯಲ್ಲಿ ಮಂಡಿರಜ್ಜು ಗಾಯ ವಾಸಿಯಾಗಲು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರೋಹಿತ್ ಬಹುತೇಕ ಚೇತರಿಸಿಕೊಂಡಿದ್ದಾರೆ. ಆದರೆ ಇದರ ಜತೆಗೆ ರೋಹಿತ್ ಈಗ ತಮ್ಮ ದೇಹ ತೂಕ ಇಳಿಸಿಕೊಳ್ಳಲು ಶ್ರಮವಹಿಸುತ್ತಿದ್ದಾರೆ. ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ರೋಹಿತ್ ತಾವು ದೇಹ ತೂಕ ಕೊಂಚ ಇಳಿಸಿಕೊಂಡಿರುವ ಸೂಚನೆ ನೀಡಿದ್ದಾರೆ. ಟೀಂ ಇಂಡಿಯಾದಲ್ಲಿ ಎಲ್ಲಕ್ಕಿಂತ ಫಿಟ್ನೆಸ್ ಗೆ ಮಹತ್ವ ಕೊಡಲಾಗುತ್ತಿದೆ. ಹೀಗಾಗಿ ರೋಹಿತ್ ಈ ಬಗ್ಗೆ ಹೆಚ್ಚಿನ ಗಮನಹರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಬಿಡಿ ಸಹವಾಸದ ಪ್ರಭಾವ: ವಿರಾಟ್ ಕೊಹ್ಲಿ 360 ಡಿಗ್ರಿ ಶಾಟ್!