Publish Date: Sun, 26 Jul 2020 (12:56 IST)
Updated Date: Sun, 26 Jul 2020 (12:57 IST)
ಮುಂಬೈ: ಐಪಿಎಲ್ ಅನೌನ್ಸ್ ಆಗಿದ್ದೇ ತಡ, ಕ್ರಿಕೆಟಿಗರಲ್ಲಿ, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಮತ್ತೆ ಕ್ರಿಕೆಟ್ ಆರಂಭವಾಗುವ ಖುಷಿಯಲ್ಲಿ ಕ್ರಿಕೆಟಿಗರು ಇದ್ದಾರೆ.
ಈ ನಡುವೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ಸಜ್ಜಾಗಿರುವ ಫೋಟೋ ಪ್ರಕಟಿಸಿಕೊಂಡಿದ್ದು, ‘ಕೊನೆಯವರೆಗೂ ನನ್ನ ಆಯ್ಕೆಯ ಅಸ್ತ್ರ’ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಿಟ್ ಮ್ಯಾನ್ ಬೇಗನೇ ಕಮ್ ಬ್ಯಾಕ್ ಮಾಡಿ ಎಂದು ಪ್ರತಿಕ್ರಿಯಿಸಿದ್ದಾರೆ.