Select Your Language

Notifications

webdunia
webdunia
webdunia
webdunia

ಏಳು ವರ್ಷಗಳಿಂದ ರೋಹಿತ್ ಶರ್ಮಾನೇ ಭಾರತೀಯ ಕ್ರಿಕೆಟ್ ನ ದೊರೆ! ಹೇಗೆ ಗೊತ್ತಾ?

ಏಳು ವರ್ಷಗಳಿಂದ ರೋಹಿತ್ ಶರ್ಮಾನೇ ಭಾರತೀಯ ಕ್ರಿಕೆಟ್ ನ  ದೊರೆ! ಹೇಗೆ ಗೊತ್ತಾ?
ವಿಶಾಖಪಟ್ಟಣ , ಗುರುವಾರ, 19 ಡಿಸೆಂಬರ್ 2019 (09:52 IST)
ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್‍ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 159 ರನ್ ಗಳಿಸಿದ ರೋಹಿತ್ ಶರ್ಮಾ ಮತ್ತೊಮ್ಮೆ ಒಂದೇ ವರ್ಷದಲ್ಲಿ ಅತ್ಯಧಿಕ ರನ್ ಪೇರಿಸಿದ ಆಟಗಾರ ರೇಸ್ ನಲ್ಲಿ ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿ ನಂ.1 ಆದರು.


ಈ ಮೂಲಕ ಸತತ ಏಳು ವರ್ಷಗಳಿಂದ ಸತತವಾಗಿ ಹಿಟ್ ಮ್ಯಾನ್ ಭಾರತದ ಪರ ಒಂದೇ ವರ್ಷ ಅತ್ಯಧಿಕ ರನ್ ಪೇರಿಸಿದ ದಾಖಲೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ನಿನ್ನೆ 28 ನೇ ಏಕದಿನ ಶತಕ ಸಿಡಿಸಿದ ರೋಹಿತ್ ಒಂದೇ ವರ್ಷದಲ್ಲಿ ಏಳು ಶತಕ ಸಿಡಿಸಿದ ದಾಖಲೆ ಮಾಡಿದರು. 1998 ರಲ್ಲಿ ಸಚಿನ್ ತೆಂಡುಲ್ಕರ್ ಒಂದೇ ವರ್ಷ 9 ಶತಕ ಸಿಡಿಸಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಈ ಮೂಲಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ನಡೆಯುವ ರನ್ ಪೈಪೋಟಿಯಲ್ಲಿ ಮತ್ತೆ ರೋಹಿತ್ ರಾಜನಾಗಿ ಮೆರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗೆ ಗೋಲ್ಡನ್ ಡಕ್ ನೀಡಿದ್ದಕ್ಕೆ ವಿಂಡೀಸ್ ನಾಯಕನ ಮೇಲೆ ಮುಯ್ಯಿ ತೀರಿಸಿಕೊಂಡ ಶಮಿ!