Publish Date: Thu, 19 Dec 2019 (09:18 IST)
Updated Date: Thu, 19 Dec 2019 (09:19 IST)
ಕೋಲ್ಕೊತ್ತಾ: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರೀಡಾಕೂಟಕ್ಕೆ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ಇಂದು ಕೋಲ್ಕೊತ್ತಾದಲ್ಲಿ ನಡೆಯಲಿದೆ.
ದೇಶ ವಿದೇಶದ ಸುಮಾರು 332 ಕ್ರಿಕೆಟಿಗರು ಹರಾಜು ಪಟ್ಟಿಯಲ್ಲಿದ್ದಾರೆ. ಇವರ ಪೈಕಿ 186 ಭಾರತೀಯ ಆಟಗಾರರು ಮತ್ತು 143 ವಿದೇಶೀ ಆಟಗಾರರಿದ್ದಾರೆ.
ದೇಶೀಯ ಆಟಗಾರರ ಪೈಕಿ ಯಶಸ್ವಿ ಜೈಸ್ವಾಲ್, ಪ್ರಿಯಾಂಕ್ ಗರ್ಗ್ ಮುಂತಾದ ಯುವ ಆಟಗಾರರು ಭಾರೀ ಮೊತ್ತಕ್ಕೆ ಖರೀದಿಯಾಗುವ ನಿರೀಕ್ಷೆಯಿದೆ. ವಿದೇಶೀ ಆಟಗಾರರ ಪೈಕಿ ವಿಂಡೀಸ್ ನ ಹೆಟ್ ಮ್ಯಾರ್, ಶೈ ಹೋಪ್ ಗೆ ಭಾರೀ ಬೇಡಿಕೆಯಿದೆ. ಯಾವ ಯಾವ ಆಟಗಾರರು ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಸಮರ್ಥ ಆಟಗಾರರನ್ನು ಖರೀದಿಸಿ ತಂಡದ ಪ್ರದರ್ಶನ ಸುಧಾರಿಸಲು ಫ್ರಾಂಚೈಸಿ ಯೋಜನೆ ಹಾಕಿಕೊಂಡಿದೆ. ಈ ಬಾರಿಯಾದರೂ ರಾಜ್ಯದ ಆಟಗಾರರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಆ ಪೈಕಿ ದೇವದತ್ತ ಪಡಿಕ್ಕಲ್ ಮುಂಚೂಣಿಯಲ್ಲಿದ್ದಾರೆ.