Publish Date: Thu, 26 Jul 2018 (09:18 IST)
Updated Date: Thu, 26 Jul 2018 (10:48 IST)
ಮುಂಬೈ: ಧೋನಿ ನಂತರ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಲು ಯೋಗ್ಯನೆಂದೇ ಹೇಳಲಾಗುತ್ತಿರುವ ರಿಷಬ್ ಪಂತ್ ತಮ್ಮ ಯಶಸ್ಸಿನಲ್ಲಿ ಧೋನಿ ಪಾತ್ರವೇನೆಂದು ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ರಿಷಬ್ ಪಂತ್ ಐಪಿಎಲ್ ಕಾಂಟ್ರಾಕ್ಟ್ ನಿಂದ ಹಿಡಿದು ವಿಕೆಟ್ ಕೀಪಿಂಗ್ ವರೆಗೆ ತಮಗೆ ಧೋನಿ ನನಗೆ ಸಹಾಯ ಮಾಡಿದರು ಎಂದು ಪಂತ್ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.
‘ನನಗೆ ಏನಾದರೂ ಸಲಹೆ ಬೇಕಾದಾಗಲೆಲ್ಲಾ ಮಹಿಬಾಯಿ ಬಳಿ ಹೋಗುತ್ತಿದ್ದೆ. ಅವರು ಐಪಿಎಲ್ ಕಾಂಟ್ರಾಕ್ಟ್ ನಿಂದ ಹಿಡಿದು ಆಟದವರೆಗೆ ಎಲ್ಲಾ ವಿಚಾರಗಳಲ್ಲೂ ಸಲಹೆ ನೀಡಿದ್ದರು. ಭಾರತದ ಡ್ರೆಸ್ಸಿಂಗ್ ರೂಂನಲ್ಲೂ ಯಾವಾಗಲೂ ಅವರು ನನಗೆ ಬೆಂಬಲವಾಗಿ ನಿಲ್ಲುತ್ತಿದ್ದರು’ ಎಂದು ರಿಷಬ್ ಪಂತ್ ಧೋನಿಗೆ ಹೊಗಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.