Select Your Language

Notifications

webdunia
webdunia
webdunia
webdunia

ಸಚಿನ್ ತೆಂಡುಲ್ಕರ್ ಕನಸು ಸದ್ಯದಲ್ಲೇ ನೋಡಬಹುದು

ಸಚಿನ್  ತೆಂಡುಲ್ಕರ್ ಕನಸು ಸದ್ಯದಲ್ಲೇ ನೋಡಬಹುದು
Mumbai , ಮಂಗಳವಾರ, 14 ಫೆಬ್ರವರಿ 2017 (09:27 IST)
ಮುಂಬೈ: ಸಚಿನ್ ತೆಂಡುಲ್ಕರ್ ಎಂದರೆ ಹಾಗೆ. ಅವರ ಆಟ, ಅವರ ಜೀವನ ಚರಿತ್ರೆಯ ಪುಸ್ತಕವಾಗಿರಲಿ. ದಾಖಲೆಯನ್ನೇ ಸೃಷ್ಟಿಸುತ್ತದೆ. ಇದೀಗ ಅವರ ಸಿನಿಮಾ ಸಚಿನ್ ಎ ಬಿಲಿಯನ್ಸ್ ಡ್ರೀಮ್ಸ್ ಮೇ 26 ರಂದು ಬಿಡುಗಡೆಯಾಗಲಿದ್ದು, ಅದು ಇನ್ನೆಷ್ಟು ದಾಖಲೆ ಮಾಡುತ್ತದೆ ನೋಡಬೇಕು.


ಹಾಲಿವುಡ್ ನಿರ್ದೇಶಕ ಜೇಮ್ಸ್ ಎಸ್ಕೈನ್ ನಿರ್ದೇಶಿಸಿರುವ ಸಚಿನ್ ಜೀವನಗಾಥೆಯ ಕತೆಯ ಸಿನಿಮಾ 26 ಕ್ಕೆ ಬಿಡುಗಡೆಯಾಗುತ್ತಿರುವುದಾಗಿ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.  ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಇದಕ್ಕೆ ಸಂಗೀತ ನಿರ್ದೇಶನವಿದೆ.

ವಿಶೇಷವೆಂದರೆ ಇದುವರೆಗೆ ಧೋನಿ, ಮೊಹಮ್ಮದ್ ಅಜರುದ್ದೀನ್ ಜೀವನ ಚರಿತ್ರೆಯ ಸಿನಿಮಾಗಳು ಬಂದಿವೆ. ಆದರೆ ಅದರಲ್ಲಿ ಬೇರೆ ನಟರು ಕ್ರಿಕೆಟಿಗರ ಪಾತ್ರ ನಿರ್ವಹಿಸಿದ್ದರು. ಆದರೆ ತೆಂಡುಲ್ಕರ್ ಸಿನಿಮಾದಲ್ಲಿ ಅವರೇ ನಟಿಸಿದ್ದಾರೆ. ಸಚಿನ್ ಬಾಲ್ಯದ ಪಾತ್ರವನ್ನು ಅವರ ಪುತ್ರ ಅರ್ಜುನ್ ತೆಂಡುಲ್ಕರ್ ನಿಭಾಯಿಸಿರುವುದು ವಿಶೇಷವಾಗಿದೆ.

ಈಗಾಗಲೇ ಈ ಚಿತ್ರದ ಬಗ್ಗೆ ಭಾರೀ ಹೈಪ್ ಕ್ರಿಯೇಟ್ ಆಗಿದೆ. ಬಾಲಿವುಡ್, ಕ್ರಿಕೆಟ್ ಜಗತ್ತಿನ ದಿಗ್ಗಜರು ಈ ಸಿನಿಮಾ ನೋಡುವುದಕ್ಕೆ ಕಾತುರರಾಗಿರುವುದಾಗಿ ಹೇಳಿಕೊಂಡಿದ್ದಾರೆ. ಕ್ರಿಕೆಟ್ ನಲ್ಲಿ ದಾಖಲೆಗಳ ರಾಶಿ ಮಾಡಿರುವ ಸಚಿನ್ ಸಿನಿಮಾದಲ್ಲಿ ಏನೆಲ್ಲಾ ದಾಖಲೆ ಮಾಡುತ್ತಾರೆ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂತೂ ಫಿಕ್ಸ್ ಆಯ್ತು ಸಚಿನ್ ಚಿತ್ರ ಬಿಡುಗಡೆ ಡೇಟ್