Select Your Language

Notifications

webdunia
webdunia
webdunia
webdunia

ಅಂತೂ ಫಿಕ್ಸ್ ಆಯ್ತು ಸಚಿನ್ ಚಿತ್ರ ಬಿಡುಗಡೆ ಡೇಟ್

ಅಂತೂ ಫಿಕ್ಸ್ ಆಯ್ತು ಸಚಿನ್ ಚಿತ್ರ ಬಿಡುಗಡೆ ಡೇಟ್
ಮುಂಬೈ , ಮಂಗಳವಾರ, 14 ಫೆಬ್ರವರಿ 2017 (08:41 IST)
ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾ 'ಸಚಿನ್: ಎ ಬಿಲಿಯನ್ ಡ್ರೀಮ್ಸ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಚಿತ್ರ ಮೇ 26ಕ್ಕೆ ಬಿಡುಗಡೆ ಕಾಣಲಿದೆ ಎಂದು ಸ್ವತಃ ಸಚಿನ್ ಟ್ವಿಟರ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.
ಪ್ರತಿಯೊಬ್ಬರು ಬಿಡುಗಡೆ ಯಾವಾಗ ಎಂದು ವಿಚಾರಿಸುತ್ತಿದ್ದರು. 26. 5.2017ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಆ ದಿನವನ್ನು ನಿಮ್ಮ ಕ್ಯಾಲೆಂಡರ್‌ನಲ್ಲಿ ಗುರುತು ಮಾಡಿಕೊಳ್ಳಿ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
 
ಸುಮಾರು 5 ದೇಶಗಳಲ್ಲಿ 30 ತಿಂಗಳುಗಳ ಕಾಲ ಚಿತ್ರೀಕರಣ ನಡೆದಿದೆ.
 
ಮುಂಬೈ ಮೂಲದ 200 ನಾಟೌಟ್ ಈ ಚಿತ್ರವನ್ನು ನಿರ್ವಿುಸಿದೆ. ಸಚಿನ್ 200 ಟೆಸ್ಟ್​ಗಳನ್ನು ಆಡಿ 100 ಸೆಂಚುರಿಗಳನ್ನು ಬಾರಿಸಿ ನಿವೃತ್ತರಾಗಿದ್ದಾರೆ. ಒಟ್ಟಾರೆ 664 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಸಚಿನ್ 34,357 ರನ್​ಗಳನ್ನು ಕಲೆಹಾಕಿದ್ದಾರೆ.
 
ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಸಿನಿಮಾ ''ದ ಅನ್‌ಟೋಲ್ಡ್ ಸ್ಟೋರಿ'' ವಿಶ್ವದಾದ್ಯಂತ ಭಾರಿ ಸಂಚಲನವನ್ನು ಸೃಷ್ಟಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಚಹಾ ಸೇವಿಸುವುದರೊಳಗೆ ಸತತ 19 ನೇ ಟೆಸ್ಟ್ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ