ಹೈದರಾಬಾದ್: ಬಿರು ಬಿಸಲಲ್ಲಿ ತಿಣುಕಾಡಿ ತಿಣುಕಾಡಿ ಕೊನೆಗೂ ಬಾಂಗ್ಲಾದೇಶ ಬ್ಯಾಟ್ಸ್ ಮನ್ ಗಳು ತಮ್ಮೆಲ್ಲಾ ವಿಕೆಟ್ ಒಪ್ಪಿಸಿತು. ಇದರೊಂದಿಗೆ ಭಾರತ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 209 ರನ್ ಗಳಿಂದ ಗೆದ್ದುಕೊಂಡಿತು.
ಇದು ವಿರಾಟ್ ಕೊಹ್ಲಿ ನೇತೃತ್ವದ ಪಡೆಗೆ ಸತತ 19 ನೇ ಟೆಸ್ಟ್ ಗೆಲುವಾಗಿದೆ. ಅಂದರೆ ಕಳೆದ ಅಷ್ಟೂ ಪಂದ್ಯಗಳಲ್ಲಿ ಭಾರತ ಒಮ್ಮೆಯೂ ಸೋಲಲಿಲ್ಲ ಎನ್ನುವುದೇ ವಿಶೇಷ. ಇಂದು ಭಾರತಕ್ಕೆ ಬಾಂಗ್ಲಾ ನೆನೆಸಿದಷ್ಟು ಸುಲಭ ತುತ್ತಾಗಲಿಲ್ಲ. ಭಾರತದ ಪರ ಅಶ್ವಿನ್ ಹಾಗೂ ಜಡೇಜಾ ತಲಾ ನಾಲ್ಕು ವಿಕೆಟ್ ಬುಟ್ಟಿಗೆ ಹಾಕಿಕೊಂಡರು.
ಪಂದ್ಯವನ್ನು ಮೂರನೇ ಅವಧಿಯವರೆಗೂ ಕೊಂಡೊಯ್ದ ಶ್ರೇಯ ಬಾಂಗ್ಲಾ ಹುಲಿಗಳಿಗೆ ಸಲ್ಲಬೇಕು. ಭಾರತದ ಬೌಲಿಂಗ್ ಚೆನ್ನಾಗಿಯೇ ಇತ್ತು. ಆದರೆ ಜಿಗುಟಿನ ಆಟದ ಮೂಲಕ ಬಾಂಗ್ಲಾ ಭಾರತಕ್ಕೆ ಸುಲಭ ಜಯ ನೀಡಲು ನಿರಾಕರಿಸಿತು. ಆದರೇನಂತೆ ಆಸ್ಟ್ರೇಲಿಯಾ ಸರಣಿಗೆ ಮೊದಲು ಈ ಟೆಸ್ಟ್ ಜಯ ಭಾರತಕ್ಕೆ ಬೂಸ್ಟ್ ನೀಡಿದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ