Publish Date: Tue, 06 Jun 2017 (09:24 IST)
Updated Date: Tue, 06 Jun 2017 (09:26 IST)
ಲಂಡನ್: ಟೀಂ ಇಂಡಿಯಾ ಆಟಗಾರರು ಇದೀಗ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಗಾಗಿ ಇಂಗ್ಲೆಂಡ್ ನಲ್ಲಿದ್ದಾರೆ. ಆದರೆ ಆಟಗಾರರ ಮೋಜಿನ ಸಂಗತಿಗಳೂ ಅಷ್ಟೇ ಜನಪ್ರಿಯವಾಗುತ್ತಿದೆ. ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ.
ಪಾಕಿಸ್ತಾನ ವಿರುದ್ಧ ಪಂದ್ಯ ಮುಗಿಸಿ ಆಟಗಾರರಿಗೆಲ್ಲಾ ಸುಸ್ತಾಗಿತ್ತು. ಅದರಲ್ಲೂ ವಿಕೆಟ್ ಹಿಂದೆ ನಿಂತು ಪ್ರತೀ ಬಾರಿಯೂ ಮೈಯೆಲ್ಲಾ ಕಣ್ಣಾಗಿಸಿ ಗೂಟ ಕಾಯುವ ಕೆಲಸವೆಂದರೆ ಸುಮ್ಮನೇ ಅಲ್ಲ ಬಿಡಿ.
ಹಾಗಾಗಿ ಪ್ರಯಾಣ ಮಾಡುತ್ತಿದ್ದಾಗ ಧೋನಿ ಸೀಟ್ ನಲ್ಲಿಯೇ ಕುಳಿತು ನಿದ್ದೆಗೆ ಜಾರಿದ್ದರು. ಅಷ್ಟಕ್ಕೇ ಪಕ್ಕದಲ್ಲಿ ಕುಳಿತಿದ್ದ ಜಡೇಜಾ ಸೆಲ್ಫೀ ಕ್ಲಿಕ್ಕಿಸಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪ್ರಕಟಿಸಿಯೇ ಬಿಟ್ಟರು. ಅಭಿಮಾನಿಗಳು ಕ್ಯಾಪ್ಟನ್ ಕೂಲ್ ನ ಹೊಸ ಅವತಾರ ನೋಡಿ ಖುಷಿಯಾಗಿ ಕಾಮೆಂಟ್ ಮೇಲೆ ಕಾಮೆಂಟ್ ಮಾಡಿದರು. ಈ ಫೋಟೋ ಈಗ ಫುಲ್ ಹಿಟ್!