Select Your Language

Notifications

webdunia
webdunia
webdunia
webdunia

ಮತ್ತೆ ಕೋಚ್ ಹುದ್ದೆಗೆ ಅರ್ಜಿ ಹಾಕಿದರೇ ಅನಿಲ್ ಕುಂಬ್ಳೆ?!

ಅನಿಲ್ ಕುಂಬ್ಳೆ
ಮುಂಬೈ: ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವೆ ಸಾಮರಸ್ಯವಿಲ್ಲ.. ಬಿಸಿಸಿಐಗೆ ಕುಂಬ್ಳೆ ಕೋಚ್ ಆಗಿ ಮುಂದುವರಿಯುವುದು ಇಷ್ಟವಲ್ಲ ಎಂದು ವರದಿಯಾದ ಬೆನ್ನಲ್ಲೂ ಅನಿಲ್ ಕುಂಬ್ಳೆ ಮತ್ತೊಮ್ಮೆ ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದಾರೆಂದು ವರದಿಯಾಗಿದೆ.

 
ಪ್ರಸಕ್ತ ಕೋಚ್ ಆಗಿರುವ ಕಾರಣ ಅನಿಲ್ ಕುಂಬ್ಳೆ ಮತ್ತೊಮ್ಮೆ ಅರ್ಜಿ ಆಹ್ವಾನಿಸಬೇಕಿರಲಿಲ್ಲ. ಅವರು ನೇರವಾಗಿ ಕೋಚ್ ಸ್ಪರ್ದೆಗೆ ಎಂಟ್ರಿ ಪಡೆಯಬಹುದಿತ್ತು. ಆದರೂ ಕುಂಬ್ಳೆ ಅರ್ಜಿ ಹಾಕಿರುವುದು ಅಚ್ಚರಿಯಾಗಿದೆ.

ಹಾಗಿದ್ದರೂ ಕುಂಬ್ಳೆ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ. ಕುಂಬ್ಳೆ ಜತೆಗೆ ಆಸ್ಟ್ರೇಲಿಯಾದ ಕ್ರೆಗ್ ಮೆಕ್ ಡರ್ಮೆಟ್ ಕೂಡಾ ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದಾರೆ. ಈ ನಡುವೆ ಟಾಮ್ ಮೂಡಿ, ವೀರೇಂದ್ರ ಸೆಹ್ವಾಗ್ ಕೂಡಾ ಸ್ಪರ್ಧೆಯಲ್ಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಟೀಂ ಇಂಡಿಯಾ ಕೋಚ್ ಹುದ್ದೆಗೆ ಭಾರೀ ಪೈಪೋಟಿ ನಡೆಯಲಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮಗಳ ವಿರುದ್ಧ ವಿಜಯ್ ಮಲ್ಯ ಗರಂ!